ಕಟ್ಮಂಡು: ನೇಪಾಳದ ಕಟ್ಮಂಡುವಿನಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಪ್ರತಿಭಟನಾ ಕಾರರು ಹೋಟೆಲೊಂದಕ್ಕೆ ಬೆಂಕಿ ಹೊತ್ತಿಸಿರುವ ಪರಿಣಾಮ ಉತ್ತರ ಪ್ರದೇಶದ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಸಾವನ್ನಪ್ಪಿರುವ ಮಹಿಳೆಯು ರಾಜೇಶ್‌ ಗೋಲಾ ಎಂದು ತಿಳಿದುಬಂದಿದ್ದು, ತಮ್ಮ ಪತಿ ರಾಮ್‌ವೀರ್‌ ಸಿಂಗ್‌ ಗೋಲಾ ಜೊತೆಯಲ್ಲಿ ಸೆಪ್ಟೆಂಬರ್‌ 7ರಂದು ನೇಪಾಳಕ್ಕೆ ಬಂದಿಳಿದಿದ್ದರು. ನೇಪಾಳದಲ್ಲಿ ಸರ್ಕಾರದ ವಿರುದ್ದ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದ, ಪ್ರತಿಭಟನಾಕಾರರು ಮನಬಂದಂತೆ ಸಿಕ್ಕ ಸಿಕ್ಕ ಅವಶೇಷಗಳಿಗೆ , ಕಟ್ಟಡಗಳಿಗೆಹಾನಿ ಮಾಡುತ್ತಿದ್ದಾರೆ. ಹಾಗೆಯೇ ಮೃತಪಟ್ಟ ಮಹಿಳೆಯಿರುವ ಹೋಟೆಲ್ಲಿಗೆ ಸೆಪ್ಟೆಂಬರ್‌ 9ರಂದು ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *