ಆಷ್ಟ್ರೇಲಿಯಾ ವಿರುದ್ದ ಲಖೌನಲ್ಲಿ ನಡೆಯಲಿರುವ ಟೆಸ್ಟ್‌ ಪಂದ್ಯಗಳಿಗೆ ಭಾರತದ ಎ ತಂಡದ ನಾಯಕನಾಗಿ ಟೀಮ್‌ ಇಂಡಿಯಾದ ಆಟಗಾರ ಶ್ರೇಯಸ್‌ ಅಯ್ಯರ್‌ರನ್ನು ನೇಮಕ ಮಾಡಲಾಗಿದೆ.

ಸೆಪ್ಟೆಂಬರ್‌ 16ರಿಂದ ಪ್ರಾರಂಭವಾಗಲಿದ್ದು, 2ನೇ ಪಂದ್ಯವೂ ಸೆ.23ರಿಂದ ನಡೆಯಲಿದೆ ಎಂದು ತಿಳಿದುಬಂದಿದೆ. ಈ 2 ಪಂದ್ಯಗಳು ಲಖೌನನ ಭಾರತ ರತ್ನ ಅಟಲ್‌ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್‌ನ ಸ್ಟೇಡಿಯಂನಲ್ಲಿ ನಡೆಯಲಿದೆ ಎನ್ನಲಾಗಿದೆ.

ಕೆ.ಎಲ್.ರಾಹುಲ್‌ ಮತ್ತು ಸಿರಾಜ್‌  2ನೇ ಪಂದ್ಯದಲ್ಲಿ ಆಟವಾಡಲಿದ್ದಾರೆ.

ಬ್ಯಾಟರ್‌, ವಿಕೆಟ್‌ ಕೀಪರ್‌ ಧ್ರುವ್  ಜುರೆಲ್‌ ತಂಡದ ಉಪನಾಯಕನನ್ನಾಗಿ ನೇಮಿಸಲಾಗಿದೆ.

ಹಾಗೆಯೇ ಅಭಿಮನ್ಯು ಈಶ್ವರನ್, ಸಾಯಿ ಸುದರ್ಶನ್ ಮತ್ತು ಪ್ರಸಿದ್ಧ್ ಕೃಷ್ಣ ಕೂಡ ಅವಕಾಶವನ್ನ ಪಡೆದುಕೊಂಡಿದ್ದಾರೆ. ಯುವ ಪೀಳಿಗೆಯ ಪ್ರತಿಭೆಗಳಾದ ಆಯುಷ್ ಬದೋನಿ, ತನುಷ್ ಕೊಟಿಯನ್, ಮನವ್ ಸುತಾರ್, ನಿತೀಶ್ ಕುಮಾರ್ ರೆಡ್ಡಿ, ಗರ್ನೂರ್ ಬ್ರಾರ್ ಕೂಡಾ ಅವಕಾಶವನ್ನು ಪಡೆದುಕೊಂಡಿದ್ದು, ಆಸೀಸ್‌ ವಿರುದ್ದ ಸೆಣಸಾಡಿ ತಮ್ಮ ಸಾಮರ್ಥ್ಯವನ್ನು ತೋರಿಸಲು ಸಿದ್ದರಾಗಿದ್ದಾರೆ ಎನ್ನಲಾಗಿದೆ.

ಮೊದಲ ಟೆಸ್ಟ್‌ ಪಂದ್ಯ : ಸೆ,16-19, 2025 ರಂದು ಲಕ್ನೋ, ಏಕಾನಾ ಸ್ಟೇಡಿಯಂನಲ್ಲಿ ನಡೆಯಲಿದೆ.
ಎರಡನೇ ಟೆಸ್ಟ್ ಪಂದ್ಯ : ಸೆ, 23-26, 2025 ರಂದು ಲಕ್ನೋ, ಏಕಾನಾ ಸ್ಟೇಡಿಯಂನಲ್ಲಿ ನಡೆಸಲು ನಿರ್ಧಾರ.
ಏಕದಿನ ಪಂದ್ಯಗಳು : ಸೆ, 30, ರಿಂದ ಅಕ್ಟೋಬರ್ 3ರವರೆಗೆ, ಹಾಗೂ ಅಕ್ಟೋಬರ್ 5, 2025 ರಂದು ಕಾನ್ಪುರ, ಗ್ರೀನ್ ಪಾರ್ಕ್ ಸ್ಟೇಡಿಯಂ ನಲ್ಲಿ ಪಂದ್ಯ ಆಟವಾಡಲು ಸಿದ್ದವಾಗಿವೆ.

Leave a Reply

Your email address will not be published. Required fields are marked *