ಬೆಂಗಳೂರು:ಸಚಿವ ಕೆ.ಎನ್.ರಾಜಣ್ಣನವರ ವಜಾ ವಿಚಾರದ ಕುರಿತು ನನಗೆ ಮಾಹಿತಿ ಇರಲಿಲ್ಲ ಯಾಕೆಂದರೆ ನೆನ್ನ ನನಗೆ ಹೆಚ್ಚು ಜ್ವರ ಬಂದು ಮಲಗಿದ್ದೆ ಎಂದು ಸಚಿವ ಹೆಚ್.ಸಿ.ಮಹದೇವಪ್ಪ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ಮಾಧ್ಯಮಮಿತ್ರರೊಂದಿಗೆ ಮಾತನಾಡಿದ ಅವರು “ನಿನ್ನೆ ಜ್ವರ ಬಂದು ಮಲಗಿದ್ದೆ” ಈ ವಿಚಾರದ ಬಗ್ಗೆ ನನಗೆ ಮಾಹಿತಿ ಇರಲಿಲ್ಲ.ಹೈಕಮಾಂಡ್ ನಮಗೆ ಸುಪ್ರೀಂ ಇದ್ದ ಹಾಗೆ ಅದು ಏನು ಹೇಳುತ್ತೋ ಅದು ಫೈನಲ್ ಅಷ್ಟೇ. ರಾಜಣ್ಣನ ವಜಾ ವಿಚಾರ ನನಗೆ ಗೊತ್ತಿಲ್ಲ.ಕಾಂಗ್ರೆಸ್ ಪಕ್ಷವೂ ನ್ಯಾಯದ ಪರವಾಗಿದೆ. ಪಕ್ಷದಲ್ಲಿ ನಾವೆಲ್ಲರೂ ದೋಸ್ತಿಗಳೇ” ಎಂದು ಸಚಿವ ಹೆಚ್.ಸಿ.ಮಹದೇವಪ್ಪ ಪ್ರತಿಕ್ರಿಯೆಯನ್ನ ನೀಡಿದ್ದಾರೆ.
