ಜಮ್ಮು-ಕಾಶ್ಮೀರ: ಕುಲ್ಗಾಮ್‌ ಅರಣ್ಯ ಪ್ರದೇಶದಲ್ಲಿ ಆಪರೇಷನ್‌ ಅಕಲ್‌ ನಡೆಯುತ್ತಿದ್ದು, ಭಯೋತ್ಪಾದನಾ ನಿಗ್ರಹದ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಹಾಗೂ ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದಿದ್ದು ಆ ಗುಂಡಿನ ದಾಳಿಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ ಮತ್ತು 9ಮಂದಿ ಸೇನಾ ಸಿಬ್ಬಂದಿಗಳು ಗಾಯಗೊಂಡಿದ್ದಾರೆ.

ಗಾಯಗೊಂಡ ಸೇನಾ ಸಿಬ್ಬಂದಿಗಳ ಸಂಖ್ಯೆಯಲ್ಲಿ ಏರಿಕೆಯಾಗಿದ್ದು 9 ಕ್ಕೆ ತಲುಪಿದೆ.ಭಯೋತ್ಪಾದಕರ ಅಡಗುತಾಣಗಳ ಬಗ್ಗೆ ಗುಪ್ತಚರ ಮಾಹಿತಿಯನ್ನ ಪಡೆದ ನಂತರ ಕಾರ್ಯಾಚರಣೆ ನಡೆಸಲಾಗುತ್ತದೆ.

ಭಾರತೀಯ ಸೈನಿಕರು,ಪೊಲೀಸರು,ಹಾಗೂ ಕೇಂದ್ರ ಮೀಸಲು ಪಡೆಯ ಜಂಟಿ ಪಡೆಗಳು ಭಯೋತ್ಪಾದಕರ ಸಂಹಾರ ಮಾಡುವ ಕಾರ್ಯಕ್ಕೆ ಸಜ್ಜಾಗಿ ನಿಂತಿದ್ದಾರೆ.

Leave a Reply

Your email address will not be published. Required fields are marked *