ಚಳಿಗಾಲ ಶುರುವಾಗುತ್ತಿದ್ದಂತೆ ಹಲವಾರು ಆರೋಗ್ಯ ಸಮಸ್ಯೆಗಳು ಬಂದು ಕಾಡುತ್ತವೆ,ಅದರಲ್ಲಿ ಕಾಲಿನ ಹಿಮ್ಮಡಿ ಒಡೆಯುವುದು ಒಂದಾಗಿದೆ.ಎಲ್ಲರಿಗೂ ಚೆನ್ನಾಗಿ ಕಾಣಬೇಕೆಂಬ ಹಂಬಲ ಎಲ್ಲರಿಗಿರುತ್ತದೆ. ಹಾಗೇಯೇ ಮುಖದ ಸೌಂದರ್ಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಆದರೆ ಮುಖದ ಸೌಂದರ್ಯ ಮಾತ್ರವಲ್ಲದೆ ಕಾಲುಗಳ ಆರೋಗ್ಯದ ಬಗ್ಗೆಯೂ ಸ್ವಲ್ಪ ಗಮನ ಹರಿಸಬೇಕಾಗುತ್ತದೆ.

ಚಳಿಗಾಲದ ಆರಂಭದಲ್ಲಿ ಅನೇಕರನ್ನು ಕಾಡುವ ಸಾಮಾನ್ಯ ಸಮಸ್ಯೆ ಎಂದರೆ ಹಿಮ್ಮಡಿ ಒಡೆಯುವುದು ತೇವಾಂಶದ ಕೊರತೆ ಮತ್ತು ಚರ್ಮದ ನಿರ್ಲಕ್ಷ್ಯದಿಂದ ಉಂಟಾಗುವ ಈ ನೋವಿನ ಸಮಸ್ಯೆಗೆ ಮನೆಮದ್ದುಗಳ ಮೂಲಕ ಹೇಗೆ ಪರಿಹಾರ ಕಂಡುಕೊಳ್ಳಬಹುದು.

ಹಿಮ್ಮಡಿ ಬಿರುಕು ಬಿಡಲು ಪ್ರಮುಖ ಕಾರಣಗಳನ್ನು ತಿಳಿಯೋಣ.

ಚಳಿಗಾಲದಲ್ಲಿ ಗಾಳಿಯಲ್ಲಿ ತೇವಾಂಶ ಕಡಿಮೆ ಇರುತ್ತದೆ, ಇದರಿಂದ ಪಾದದ ಚರ್ಮ ಒಣಗಿ ಬಿರುಕು ಬಿಡುತ್ತದೆ.

ಪಾದಗಳನ್ನು ಸರಿಯಾಗಿ ತೊಳೆಯದಿದ್ದರೆ ಅಥವಾ ಧೂಳಿನಲ್ಲಿ ಓಡಾಡಿದರೆ ಚರ್ಮ ಗಟ್ಟಿಯಾಗಿ ಒಡೆಯಲು ಶುರುವಾಗುತ್ತದೆ.

ವಿಟಮಿನ್ ಇ ಅಥವಾ ಜಿಂಕ್ ಕೊರತೆಯಿಂದಲೂ ಈ ಸಮಸ್ಯೆ ಉಂಟಾಗಬಹುದು.

ಸರಳ ಮನೆಮದ್ದುಗಳು

ಕೊಬ್ಬರಿ ಎಣ್ಣೆ ಅಥವಾ ವ್ಯಾಸಲಿನ್: ರಾತ್ರಿ ಮಲಗುವ ಮುನ್ನ ಪಾದಗಳನ್ನು ಸ್ವಚ್ಛವಾಗಿ ತೊಳೆದು, ಕೊಬ್ಬರಿ ಎಣ್ಣೆ ಅಥವಾ ವ್ಯಾಸಲಿನ್ ಹಚ್ಚಿ ಕಾಲುಚೀಲ ಧರಿಸುವುದರಿಂದ ಚರ್ಮ ಮೃದುವಾಗುತ್ತದೆ.

ಬಿಸಿನೀರಿನ ಸ್ನಾನ: ವಾರಕ್ಕೊಮ್ಮೆ ಉಗುರು ಬೆಚ್ಚಗಿನ ನೀರಿಗೆ ಸ್ವಲ್ಪ ಉಪ್ಪು ಮತ್ತು ನಿಂಬೆ ರಸ ಹಾಕಿ 15 ನಿಮಿಷ ಪಾದಗಳನ್ನು ನೆನೆಸಿಟ್ಟು, ನಂತರ ಸ್ಕ್ರಬ್ ಮಾಡುವುದರಿಂದ ಸತ್ತ ಕೋಶಗಳು ನಿವಾರಣೆಯಾಗುತ್ತವೆ.

ಜೇನುತುಪ್ಪ: ಜೇನುತುಪ್ಪವು ನೈಸರ್ಗಿಕ ಮೊಯಿಶ್ಚರೈಸರ್ ಆಗಿ ಕೆಲಸ ಮಾಡುತ್ತದೆ. ಇದನ್ನು ಹಚ್ಚುವುದರಿಂದ ಬಿರುಕುಗಳು ಬೇಗ ಗುಣವಾಗುತ್ತವೆ.

ಬಾಳೆಹಣ್ಣಿನ ಪೇಸ್ಟ್: ಚೆನ್ನಾಗಿ ಹಣ್ಣಾದ ಬಾಳೆಹಣ್ಣನ್ನು ಮ್ಯಾಶ್ ಮಾಡಿ ಹಿಮ್ಮಡಿಗಳಿಗೆ ಹಚ್ಚಿ 20 ನಿಮಿಷ ಬಿಟ್ಟು ತೊಳೆದರೆ ಉತ್ತಮ ಫಲಿತಾಂಶ ಸಿಗುತ್ತದೆ.

Leave a Reply

Your email address will not be published. Required fields are marked *