ಬಿಗ್‌ಬಾಸ್ ಸೀಜನ್ 12 ಫಿನಾಲೆಗೆ ಬಂದು ತಲುಪಿದ್ರೂ ಸ್ಪರ್ಧಿಗಳ ನಡುವಿನ ಜಗಳಗಳು ಮುಗಿಯುವ ಸಾದ್ಯತೆ ತುಂಬಾ ಕಡಿಮೆಯಿದೆ.ಕಳೆದ ಎಪಿಸೋಡಿನಲ್ಲಿ ಗಿಲ್ಲಿ ಅಶ್ವಿನಿಗೌಡ ಮತ್ತು ಧ್ರುವಂತ್ ಅವರನ್ನು ರೇಗಿಸುತ್ತಿದ್ದ.ಅಶ್ವಿನಿ ಕ್ಯಾಪ್ಟನ್ ಆಗುವ ವಿಷಯಕ್ಕಂತೂ ಗಿಲ್ಲಿ ಸ್ವಲ್ಪ ಹೆಚ್ಚೇ ಮಾತನಾಡಿದ್ದಾನೆ ಎನ್ನಬಹುದು.

ಟಾಪ್ 6 ಟಾಸ್ಕಿನಲ್ಲಿ ಧ್ರುವಂತ್ ಮತ್ತು ಗಿಲ್ಲಿ ನಡುವಿನ ಆಟವಾಗಿತ್ತು. ಧ್ರುವಂತ್ ಎದುರು ಸೋತ್ರೆ ನನ್ನನ್ನು ಹೀಯಾಳಿಸುತ್ತಾರೆ, ಅಷ್ಟೇ ಗೆಲ್ಲಲೇ ಬೇಕು ಎಂದು ಗಿಲ್ಲಿ ತುಂಬಾ ಎಪರ್ಟ್ ಹಾಕಿ ಆಟವಾಡಿದರೂ ಲಕ್ ಕೈ ಹಿಡಿಯಲಿಲ್ಲ ಎನ್ನಲಾಗಿದೆ.

ಎಷ್ಟೇ ಎಪರ್ಟ್ ಹಾಕಿ ಆಟವಾಡಿದರೂ ಮನದಲ್ಲಿದ್ದ ಭಯದಿಂದ ಇಲ್ಲಿ ಯಾಕೋ ಆಟದಲ್ಲಿ ಸೋತು ಸಪ್ಪೆ ಮುಖ ಮಾಡಿಕೊಂಡ. ಸೋಲಿನಿಂದ ಗಿಲ್ಲಿಗೆ ಏನು ಪರಿಣಾಮ ಬೀರದಿದ್ದರೂ ಎಂಟೈರ್ ಟೀಂ ಮೇಲೆ ಪರಿಣಾಮ ಬೀರತ್ತದೆ ಎಂಬ ಮಾತು ಸುಳ್ಳಲ್ಲ.ಸೋತ ಗಿಲ್ಲಿಯನ್ನು ಅಶ್ವಿನಿಗೌಡ ಮತ್ತು ಧ್ರುವಂತ್ ಕಾಡಿಸುತ್ತಾರೆ ಎಂದರೆ ಅವರೂ ಯಾಕೋ ಸೈಲೆಂಟ್ ಆಗಿದ್ದಾರೆ. ಹಾಗಂದ ಮಾತ್ರಕ್ಕೆ ಅವರು ಸೈಲೆಂಟ್ ಆಗಿರ್ತಾರೆ ಎಂದರೆ ನಂಬುವುದಕ್ಕೆ ಆಗಲ್ಲ. ಸಮಯ ಬಂದಾಗ ಸ್ಟಾಂಡ್ ತೆಗೆದುಕೊಳ್ಳದೇ ಬಿಡುವುದಿಲ್ಲ.

ಬಿಗ್‌ಬಾಸ್ ಮನೆಯಲ್ಲಿರುವವರೆಲ್ಲರೂ ಈಗ ಅವರವರ ದಾಟಿಯಲ್ಲಿ ಆಟವನ್ನಾಡುತ್ತಿದ್ದಾರೆ.ಯಾರು ಯಾವಾಗ ಹೇಗೆ ಬದಲಾಗ್ತಾರೆ ಎಂಬುದನ್ನು ಯಾರು ಊಹಿಸಲು ಸಾದ್ಯವಿಲ್ಲ. ಚೆನ್ನಾಗಿ ಆಡಿದವರು ಗೆಲುವನ್ನು ಪಡೆಯುತ್ತಾರೆ ಎಂದಷ್ಟೇ ಹೇಳಬಹುದು.
