ಧರ್ಮಸ್ಥಳ:ಧರ್ಮಸ್ಥಳ ಪ್ರಕರಣದಲ್ಲಿ ಮತ್ತೊಂದು ಟ್ವೀಸ್ಟ್‌, ಧರ್ಮಸ್ಥಳ ಬಂಗ್ಲಗುಡ್ಡದಲ್ಲಿ ರಾಶಿ ರಾಶಿ ಮೂಳೆ ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಪತ್ತೆಯಾಗಿರುವ ಮೂಳೆಗಳನ್ನು ಎಸ್‌ಐ ಟಿ ವಶಕ್ಕೆ ತೆಗೆದುಕೊಂಡಿದೆ.

ಬಂಗ್ಲಗುಡ್ಡ  ಕಾಡಿನಲ್ಲಿ ಎಸ್‌ಐಟಿ ಶೋಧಕಾರ್ಯ ನಡೆಸುತ್ತಿರುವ ಸಮಯದಲ್ಲಿ ರಾಶಿ ರಾಶಿ ಮೂಳೆಗಳು ಸಿಕ್ಕಿದ್ದು, ಎಸ್‌ಐಟಿ ತಂಡವೂ ಆ ಅವಶೇಷಗಳನ್ನು ವಶಪಡಿಸಿಕೊಂಡಿವೆ ಎಂಬ ಮಾಹಿತಿ ಲಭ್ಯವಾಗಿದೆ.

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಗ್ಲಗುಡ್ಡವನ್ನು ಮಹಜರು ನಡೆಸಲು ಎಸ್‌ಐಟಿಗೆ ಇಲಾಖೆಯು ಅನುಮತಿಯನ್ನು ನೀಡಿತ್ತು. ಈ ಹಿನ್ನೆಲೆಯಲ್ಲಿಯೇ ಧರ್ಮಸ್ಥಳದ ನೇತ್ರಾವತಿ ನದಿ ತೀರದ ಬಂಗ್ಲಗುಡ್ಡ ಪ್ರದೇಶದಲ್ಲಿ ವಿಠಲಗೌಡ ಬುರುಡೆಯನ್ನು ತಂದಿರುವ ಸ್ಥಳವನ್ನು ಅಧಿಕಾರಿಗಳು ಮಹಜರು ನಡೆಸಿದ್ದರು ಎನ್ನಲಾಗಿದೆ.

ಧರ್ಮಸ್ಥಳದಲ್ಲಿ ನೂರಾರು ಹೆಣಗಳನ್ನು ಹೂತಿಟ್ಟಿದ್ದೇನೆ ಎನ್ನುವ ಆರೋಪ ಮಾಡಿದ ಮಾಸ್ಕ್‌ ಮ್ಯಾನ್‌ ಚೆನ್ನಯ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಠಲಗೌಡನ ವಿಡಿಯೋವೊಂದು ಸಾಮಾಜಿಕ ಜಾಲಾತಾಣದಲ್ಲಿ ವೈರಲ್‌ ಆಗಿತ್ತು. ಬಂಗ್ಲಗುಡ್ಡದಲ್ಲಿ ಹೆಣಗಳ ರಾಶಿಯನ್ನು ನೋಡಿದ್ದೇನೆ. ಮೊದಲ ಬಾರಿ ಹೋದಾಗ ಅಸ್ಥಿಪಂಜರ ನೋಡಿದ್ದೆ. 2 ನೇ ಬಾರಿ ವಾಮಾಚಾರದ ವಸ್ತುಗಳನ್ನು ಮತ್ತು ಬಟ್ಟೆಗಳನ್ನು ನೋಡಿದ್ದೇ, ಎಂಬ ಸ್ಟೋಟಕ ಹೇಳಿಕೆಯನ್ನು ನೀಡಿದ ಕಾರಣದಿಂದ ಎಸ್‌ಐಟಿ ಅಧಿಕಾರಿಗಳು ಶೋಧಕಾರ್ಯ ನಡೆಸಿದ್ದರು ಎನ್ನಲಾಗಿದೆ.

Leave a Reply

Your email address will not be published. Required fields are marked *