ಬೆಂಗಳೂರು: ರಾಜ್ಯದಲ್ಲಿ ಸೈಬರ್‌ ವಂಚಕರ ಹಾವಳಿ ಹೆಚ್ಚಾಗುತ್ತಿದ್ದು, ಹೆಚ್ಚು ರಾಜಕೀಯ ವ್ಯಕ್ತಿಗಳು ಮತ್ತು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡವರನ್ನು ಹೆಚ್ಚು ಟಾರ್ಗೆಟ್‌ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇತ್ತೀಚೆಗೆ ಸೈಬರ್‌ ಕ್ರೈಂಗಳು ಹೆಚ್ಚಾಗುತ್ತಿದ್ದು, ಮಾಜಿ ಸಿಎಂ ಸದಾನಂದರವರ ಅಕೌಂಟ್‌ ಹ್ಯಾಕ್‌ ಮಾಡಿದ್ದರು. ಸಂಸದ ಸುಧಾಕರ್‌ ಪತ್ನಿಯವರಿಗೆ ಸೈಬರ್‌ ವಂಚಕರು 14 ಲಕ್ಷ ದೋಚಿದ್ದಾರೆ. ಅದೇ ರೀತಿಯಲ್ಲಿಯೇ ರಾಜ್ಯಸಭಾ ಸದಸ್ಯೆ ಸುಧಾಮೂರ್ತಿಯವರನ್ನು ವಂಚಿಸಲು ಸೈಬರ್‌ ವಂಚಕರು ವಂಚು ಹಾಕಿದ್ದರು ಎನ್ನುವ ಮಾಹಿತಿಯು ಲಭ್ಯವಾಗಿದೆ ಎನ್ನಲಾಗಿದೆ.

ಸುಧಾಮೂರ್ತಿಯವರಿಗೆ ಸೈಬರ್‌ ವಂಚಕರು ಕರೆ ಮಾಡಿದ್ದು, ನಿಮ್ಮ ಮೊಬೈಲ್‌ ಸಂಖ್ಯೆ ಆಧಾರ್‌ಗೆ ಲಿಂಕ್‌ ಮಾಡಿಸಿಲ್ಲವೆಂದು, ನಿಮ್ಮ ಮೊಬೈಲಿಗೆ ಅಶ್ಲೀಲ ವಿಡಿಯೋಗಳು ರವಾನೆಯಾಗುತ್ತಿದ್ದವು, ಅದನ್ನು ನಾವು ನಿಲ್ಲಿಸಿದ್ದೇವೆ ಎಂದು ಸಬೂಬು ಹೇಳಿ ಪರ್ಸನಲ್‌ ದಾಖಲೆಗಳ ಸಂಬಂಧ ವಿಚಾರಿಸಿದ್ದಾರೆ .

ಎಲ್ಲವನ್ನೂ ಗಮನಿಸಿದ ಸುಧಾಮೂರ್ತಿಯವರು ವಂಚಕರ ಬಲೆಗೆ ಬೀಳದೆ ಪೊಲೀಸ್‌ಗೆ ದೂರನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *