ಬೆಂಗಳೂರು: ದರ್ಶನ್ ಮತ್ತು ಪವಿತ್ರಾಗೌಡ ಮದುವೆ ಆಗಿದ್ರಾ? ಎನ್ನು ಪ್ರಶ್ನೆ ಪೋಟೋ ನೋಡಿದ ಎಲ್ಲರ ಮನಸ್ಸಲ್ಲಿಯೂ ಮೂಡಿದೆ. ಆದರೂ ಇವರ ಮದುವೆ ಆಗಿರುವುದಕ್ಕೆ ಯಾವ ಸಾಕ್ಷಿಯೂ ಲಭ್ಯವಾಗಿಲ್ಲ. ಕೆಲವರು AI ಪೋಟೋ ಇರಬಹುದು ಎಂದರೆ, ಮತ್ತೆ ಕೆಲವರು ಮದುವೆ ಆಗಿದ್ರೂ, ಆಗಿರಬಹುದು ಎಂಬ ಉಹಾಪೋಹಗಳು ಒಡಾಡುತ್ತಿವೆ.
ದರ್ಶನ್ ಮತ್ತು ಪವಿತ್ರಾಗೌಡರ ಮದುವೆ ಪೋಟೋ ವೈರಲ್ ಆಗಿರುವುದರಲ್ಲಿ ಇಬ್ಬರೂ ಮದುವೆಯ ಉಡುಗೆಯನ್ನು ತೊಟ್ಟುಕೊಂಡಿದ್ದು, ಅರಿಶನ ದಾರವಿರುವುದನ್ನು ಕಾಣಬಹುದು.ಈ ಪೋಟೋ 10 ವರ್ಷದ ಹಿಂದೆ ತೆಗೆದಿರುವ ಪೋಟೋ ಆಗಿದ್ದು, ದರ್ಶನ್ ಕೈಗೆ ಪೆಟ್ಟಾಗಿದೆ ಆದ್ದರಿಂದ ಇವರು ಊಟ ಮಾಡಿಸುವ ಪೋಟೋ ಕೂಡಾ ವೈರಲ್ ಆಗಿದೆ ಎನ್ನಲಾಗಿದೆ.
ದರ್ಶನ್ ಅಂದ್ರೆ ಟಿಆರ್‌ಪಿ, ಟಿಆರ್‌ಪಿ ಅಂದ್ರೆ ದರ್ಶನ್ ಎನ್ನುವ ಹಾಗೆ ದರ್ಶನ್ ಹೆಸರು ಸದಾ ಚಾಲ್ತಿಯಲ್ಲಿರುತ್ತದೆ ಅಥವಾ ಸುದ್ದಿಯಲ್ಲಿರುತ್ತದೆ.
