ಬೆಂಗಳೂರು: ಮುಡಾಹಗರಣದ ಪ್ರಕರಣದ ವಿಚಾರವನ್ನು ಡೈವರ್ಟ್‌ ಮಾಡಲು ಜಾತಿಗಣತಿಯ ಜಾರಿ ಮಾಡುತ್ತೇವೆ ಎಂದು ಡ್ರಾಮ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರು ಸಿಎಂ ಸಿದ್ದರಾಮಯ್ಯವರ ವಿರುದ್ಧ ವಾಗ್ದಾಳಿಯನ್ನು ನಡೆಸಿರುವುದು ತಿಳಿದುಬಂದಿದೆ.

ಹಿಂದಿನ ಹತ್ತು ವರ್ಷಗಳಿಂದ ಜಾತಿಗಣತಿಯನ್ನು ಜಾರಿ ಮಾಡುತ್ತೇವೆ ಎಂದು ಹೇಳಿಕೊಂಡು ಬರುತ್ತಿರುವ ಕಾಂಗ್ರೆಸ್ಸಿಗರು ತಾವು ಮಾಡಿರುವ ಘನಂದಾರಿ ಕೆಲಸಗಳನ್ನು ಮುಚ್ಚಿಹಾಕಲು ಜಾತಿಗಣತಿಯ ವಿಷಯವನ್ನು ಮುನ್ನಲೆಗೆ ತಂದು ಜನರ ಗಮನವನ್ನು ತಮ್ಮೆಡೆಗೆ ಸೆಳೆದುಕೊಂಡು ಮುಡಾ ವಿಚಾರವನ್ನು ಮುಚ್ಚಿಹಾಕಲು ಎಣೆದಿರುವ ತಂತ್ರ ಎಂದಿದ್ದಾರೆ.

ಹಿಂದುಳಿದ ವರ್ಗಗಳ ಸಮುದಾಯಗಳ ನಾಯಕರೊಂದಿಗೆ ಸಿಎಂಸಿದ್ದರಾಮಯ್ಯನವರು ಸಂವಾದ ನಡೆಸಿದ್ದು ಇನ್ನಿತರ ಸಾಮಾಜಿಕ ಕಾರ್ಯಗಳ ಕುರಿತು ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ ಎನ್ನಲಾಗಿದೆ.

Leave a Reply

Your email address will not be published. Required fields are marked *