ಬೆಂಗಳೂರು: ಕಾಂಗ್ರೆಸ್ ಸರ್ಕಾರ ಬಿದ್ದರೂ ತಲೆಕೆಡಿಸಿಕೊಳ್ಳದೆ ಜಾತಿ ಗಣತಿ ಜಾರಿ ಮಾಡಬೇಕೆಂದು ವಿಧಾನಪರಿಷತ್ ಸದಸ್ಯರಾದ ಬಿ.ಕರ.ಹರಿಪ್ರಸಾದ್ ತಿಳಿಸಿದ್ದಾರೆ.
ಜಾತಿ ಗಣತಿಯನ್ನು ಜಾರಿ ಮಾಡುವ ವಿಚಾರ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಇದೆ. ಆದ್ದರಿಂದ ಜಾತಿ ಗಣತಿಯನ್ನು ಜಾರಿ ಮಾಡಲು ಯಾಕೆ ಸರ್ಕಾರ ಯೋಚಿಸುತ್ತಿದೆ ಎಂದು ಹರಿಪ್ರಸಾದ್ ಪ್ರಶ್ನಿಸಿದ್ದಾರೆ.
ಜಾತಿ ಗಣತಿ ಜಾರಿ ಮಾಡಿದರೆ ಎಲ್ಲಾ ಸಮುದಾಯಗಳಿಗೂ ಅನುಕೂಲವಾಗುತ್ತದೆ, ಜಾತಿ ಗಣತಿಯನ್ನು ಜಾರಿ ಮಾಡುವುದರಿಂದ ಸರ್ಕಾರ ಬೀಳುತ್ತದೆ ಎಂದಾದರೆ ಬೀಳಲಿ , ಇಡೀ ಪ್ರಪಂಚವೇ ತಲೆಕೆಳಗಾದರೂ ಜಾತಿಗಣತಿ ಅನುಷ್ಠಾನ ಆಗಲೇಬೇಕೆಂದು ಕಾಂಗ್ರೆಸ್ಸಿನ ನಾಯಕರಾದ ಹರಿಪ್ರಸಾದ್ ಆಗ್ರಹ ಮಾಡಿದ್ದಾರೆ.