ಕಳೆದ ವಾರ ಕ್ಯಾಪ್ಟನ್ಸಿ ಟಾಸ್ಕಿನಲ್ಲಿ ಧನುಷ್ ಗೆದ್ದು ಕ್ಯಾಪ್ಟನ್ ಆಗಿದ್ದರು.ಅವರ ಕ್ಯಾಪ್ಟನ್ಸಿ ಸಮಯದಲ್ಲಿ ಟಾಸ್ಕ್‌ಗಳಿಲ್ಲದ ಕಾರಣ ಅವರು ಕ್ಯಾಪ್ಟನ್ ಆಗಿದ್ದು, ಅಷ್ಟಾಗಿ ಸದ್ದು ಮಾಡಲಿಲ್ಲ. ಆದರೆ ಮಾಳು ಕ್ಯಾಪ್ಟನ್ ಆದ ಕೂಡಲೇ ಹೊಸಹೊಸ ಸವಾಲುಗಳು ಎದುರಾಗಿವೆ.

ಮನೆಯಲ್ಲಿ ಮಾಳು ಕ್ಯಾಪ್ಟನ್ ಆಗಲು ಸುಧಿಯವರಿಂದ ವಿರೋದ ವ್ಯಕ್ತವಾಗಿತ್ತು.ಮಾಳು ಬಿಗ್‌ಬಾಸ್ ಮನೆಯ ಕ್ಯಾಪ್ಟನ್ ಎನ್ನುವುದನ್ನು ಮರೆತು ಮಾಳುಗೇ ಮೆದುಳು ಇಲ್ಲ ಎಂದು ಸುಧಿ ಕೆಂಡವನ್ನು ಉಗುಳಿದ್ದಾರೆ.

ಮಾಳೂ ಧುವಂತ್ ತಲೆಯಲ್ಲಿ ಸಗಣೀ ತುಂಬಿದೆ. ಒಂದು ಬಕೆಟ್ ಸಗಣಿಯಲ್ಲಿ ಅಭಿಷೇಕ ಮಾಡ್ರೂ ಕೂಡಾ ಅವರನ್ನೇ ಕ್ಯಾಪ್ಟನ್ ಆಗಿ ಆಯ್ಕೆ ಮಾಡಿದ್ದಾರೆ.ಧ್ರುವಂತ್ ತಲೆಯಲ್ಲಿ ಸಗಣಿಯೇ ತುಂಬಿರಬೇಕು ಎಂದು ಕಾಕ್ರೋಚ್ ಸುಧಿ ಕೆಂಡಮಂಡಲವಾಗಿದ್ದಾರೆ.ಈ ಮಾತಿಗೆ ಉತ್ತರ ನೀಡಿದ ಮಾಳು ಹೀಗೆ ಹೇಳಿದ್ದಾರೆ.ಯಾರಿಗೆ ಏನು ಕೊಡಬೇಕು ಎನ್ನುವುದು ನನಗೆ ಚೆನ್ನಾಗಿ ತಿಳಿದಿದೆ ಎಂದು ಪ್ರತಿಕ್ರಿಯೆ ನೀಡಿದಾಗ ನಿನ್ನ ಜೊತೆ ಮಾತನಾಡುವುದೇ ವೆಸ್ಟ್ ಎಂದು ಸುಧಿ ಹೇಳಿದ್ದಾರೆ.
ಹೇಗೆಂದರೆ ಹಾಗೆ ಬೇಕಾಬಿಟ್ಟಿ ನಿರ್ಧಾರವನ್ನು ತೆಗೆದುಕೊಳ್ಳೊದಕ್ಕೆ ನನಗೇನು ಹುಚ್ಚು ಹಿಡಿದಿದ್ಯಾ ಎಂದು ಮಾಳು ಹೇಳಿರುವ ಮಾತಿಗೆ ಉತ್ತರಿಸಿದ ಸುಧಿ ʻʻಹುಚ್ಚು ಹಿಡಿಯುವುದಕ್ಕೂ ತಲೆಯಲ್ಲಿ ಮೆದುಳು ಇರಬೇಕು.ನಿನಗೆ ಅದು ಇಲ್ಲ “ಎಂದು ಹೇಳಿದ್ದಾರೆ.ಇದಲ್ಲದೇ ರಾಶಿಕಾ ಕೂಡಾ ಮಾಳು ವಿರುದ್ದ ಕತ್ತಿ ಮಸೆಯುತ್ತಾ ಹೀಗಂದಿದ್ದಾರೆ: ನನ್ನನ್ನು ಬಿಗ್‌ಬಾಸ್ ಮನೆಯ ಕಸ ಎಂದು ಯಾಕೆ ಪರಿಗಣಿಸಿದ್ದೀರಿ ಇದಕ್ಕೆ ಕಾರಣ ತಳಿಸಿ ಎಂದು ಕಿರುಚಿದ್ದಾರೆ.ಮಾಳು ಬಿಗ್‌ಬಾಸ್ ಮನೆಯಲ್ಲಿ ಯಾರೊಂದಿಗೂ ಜಗಳ ಮಾಡಿಕೊಳ್ಳದೆ ಹೆಚ್ಚು ಮಾತನಾಡದೆ ತಮ್ಮ ಪಾಡಿಗೆ ತಾವು ಎನ್ನುವಂತೆ ಇದ್ದವರು ಇದೀಗ ಮಾತನಾಡುವ ಸಮಯ ಬಂದಿದೆ. ಮಾಳು ತನ್ನ ವಿರುದ್ದ ಕತ್ತಿ ಮಸೆಯುತ್ತಿರುವವರ ವಿರುದ್ದ ತಿರುಗಿ ಬೀಳೂತ್ತಾರಾ? ಎಂಬುದನ್ನು ಕಾದುನೋಡಬೇಕಿದೆ.
