ಬಿಗ್‌ಬಾಸ್‌ ಮನೆಯಲ್ಲಿ ಒಂದಲ್ಲಾ ಒಂದು ವಿಷಯಕ್ಕೆ ಜಗಳಗಳು ಮನಸ್ತಾಪಗಳುನಡೆಯುತ್ತಲೇ ಇರುತ್ತವೆ. ಹಾಗೆಯೇ ಗಿಲ್ಲಿ ನಟನ ಮೇಲೆ ಧ್ರುವಂತ್‌ ಮತ್ತು ರಿಶಾ ಮುಗಿಬಿದ್ದಿದ್ದಾರೆ.

ಬಿಗ್‌ಬಾಸ್‌ ಮನೆಗೆ ಎಂಟ್ರಿಯಾದಾಗಿನಿಂದಲೂ ಗಿಲ್ಲಿ ನಟ ಜನರಿಗೆ ತಮ್ಮ ಕಾಮಿಡಿ ಕೌಶಲ್ಯದ ಮೂಲಕ ಮನರಂಜನೆ ನೀಡುತ್ತಾ ಬಂದಿದ್ದಾರೆ. ಮೊದಮೊದಲು ಗಿಲಗಲಿ ವಿರುದ್ದ ಅಶ್ವಿನಿಗೌಡ ಸಿಮಿಡಿಯುತ್ತಿದ್ದರು.ಆದರೀಗ ರಿಶಾ ಮತ್ತು ಧ್ರುವಂತ್‌ ಕೂಡಾ ಗಿಲ್ಲಿ ನಟನ ವಿರುದ್ದ ಮಾತನಾಡಲು ಪ್ರಾರಂಭಿಸಿದ್ದಾರೆ.

ಬಿಗ್‌ಬಾಸ್‌ ಮನೆಯಲ್ಲಿ ಒಳ್ಳೆ ಕಾಮಿಡಿ ಮಾಡಿಕೊಂಡು ಎಲ್ಲರನ್ನೂ ನಗಿಸುತ್ತಾ ತಮ್ಮ ಛಾಪನ್ನು ಮೂಡಿಸಿದ ಗಿಲ್ಲಿ ಎಲ್ಲರಿಗೂ ಟಾರ್ಗೆಟ್‌ ಆಗಿದ್ದಾರಾ? ಎನ್ನುವ ಪ್ರಶ್ನೆ ನೋಡುಗರಲ್ಲಿ ಮೂಡುತ್ತದೆ.

ಕಾಮಿಡಿ ನಟನೆಯಿಂದ ಫೇಮಸ್‌ ಆದ ಗಿಲ್ಲಿನಟ ತನ್ನ ಶೈಲಿಯಲ್ಲಿ ಆಟವನ್ನಾಡಿಕೊಂಡು ಬರುತ್ತಿದ್ದಾನೆ. ಬಿಗ್‌ಬಾಸ್‌ ಮನೆಯಲ್ಲಿ ಗಿಲ್ಲಿಯನ್ನು ಕಂಡರೆ ಇತ್ತೀಚೆಗೆ ಕಿಡಿಕಾರುತ್ತಿದ್ದಾರೆ.ಆ ಗುಂಪಿಗೆ ರಿಶಾ ಮತ್ತು ಧ್ರುವಂತ್‌ ಕೂಡಾ ಸೇರಿಕೊಂಡಿದ್ದಾರೆ.ಅಶ್ವಿನಿಗೌಡ ಮೊದಲಿನಿಂದಲೂ ಗಿಲ್ಲಿಯನ್ನು ಕಂಡರೆ ಆಗುತ್ತಿರಲಿಲ್ಲ. ಇತ್ತೀಚೆಗೆ ನನ್ನ ಹೆಸರಿಗಿಂತಲೂ ಗಿಲ್ಲಿ ಹೆಸರು ಹೆಚ್ಚು ಕೇಳಿ ಬರುತ್ತಿರುವ ಕಾರಣವೊ ಏನೊ, ಉರಿಯೋ ಬೆಂಕಿಗೆ ತುಪ್ಪ ಸುರಿದು ಸುಮ್ಮನಾಗುತಿದ್ದರು.ಅಶ್ವಿನಿಗೌಡರವರ ಮಾತುಗಳನ್ನು ಕೇಳಿಕೊಂಡು ಇನ್ನುಳಿದ ಅಭ್ಯರ್ಥಿಗಳು ಗಿಲ್ಲಿ ಜೊತೆಗೆ ಜಗಳವಾಡುತ್ತಿದ್ದಾರೆ.

ವೈಲ್ಡ್‌ಕಾರ್ಡ್‌ನಲ್ಲಿ ಎಂಟ್ರಿಯಾದ ರಿಶಾ ಗಿಲ್ಲಿಗೆ ನು-ನಾಜೂಕಿನ ಪಾಠ ಮಾಡುತ್ತಿದ್ದರೆ, ಧ್ರುವಂತ್‌ ನೀನು ಬೇರೆಯವರನ್ನು ನೋಡಿ ಕಾಮಿಡಿ ಮಾಡುವುದನ್ನು ಬಿಟ್ಟು ಬೇರೆ ಏನನ್ನಾದರೂ ಮಾಡಿ ವಿಷೇಶವಾಗಿ ಗುರುತಿಸಿಕೊಂಡಿದ್ದೀಯಾ? ಎಂದು ಪ್ರಶ್ನೆ ಮಾಡಿದ್ದಾರೆ. ನಿನ್ನ ಬಗ್ಗೆ ಜನರಿಗೆ ಒಳ್ಳೆ ಅಭಿಪ್ರಾಯವಿಲ್ಲವೆಂದ ಧ್ರುವಂತ್‌ಗೆ ಹು ಬಿಡಪ್ಪ ನಿಮ್ಮ ಬಗ್ಗೆಯೂ ಜನ ಏನೇನು ಮಾತಾಡ್ತಾರೆ ಎಂಬುದು ನನಗೆ ಗೊತ್ತಿದೆ ಎಂದು ತಿರುಗೇಟನ್ನು ನೀಡಿದ್ದಾರೆ.

ಇದನ್ನು ಕೇಳಿದ ಧ್ರುವಂತ್‌ ನನ್ನ ಬಗ್ಗೆ ಮಾತನಾಡಬೇಡ , ನಿನ್ನನ್ನು ನೀನು ಪ್ರೂವ್‌ ಮಾಡು ಎಂದು ಹೇಳಿದ್ದಾರೆ. ಇದಕ್ಕೆ ಉತ್ತರಿಸಿದ ಗಿಲ್ಲಿ ನನ್ನನ್ನು ನಾನು ಪ್ರೂವ್‌ ಮಾಡಿಕೊಂಡಿರುವುದಕ್ಕೆ ನಾನು ಕಿಚ್ಚನ ಚಪ್ಪಾಳೆ ಪಡೆದದ್ದು, ಎಂದು ಟಾಂಗ್‌ ನೀಡಿದ್ದಾರೆ.ಹೀಗೆ ಧ್ರುವಂತ್‌ ಮತ್ತು ಗಿಲ್ಲಿಯ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ಜಗಳ ಎಲ್ಲಿ ಹೋಗಿ ಮುಟ್ಟುತ್ತೋ ಕಾದುನೋಡಬೇಕು.

Leave a Reply

Your email address will not be published. Required fields are marked *