ಧಾರಾವಾಡ: 2 ತಿಂಗಳ ಗೃಹಲಕ್ಷ್ಮಿ ಹಣವನ್ನು ನೀಡದಿದ್ದ ಕಾರಣಕ್ಕ ಎಮಾತನಾಡುವ ಬಿಜೆಪಿಗರು 15ಲಕ್ಷ ರೂ ಕೊಡುತ್ತೇವೆ ಎಂದು ಹೇಳಿಕೊಂಡು ದೇಶವೆಲ್ಲಾ ತಿರುಗಾಡಿದ ನಿಮಗೆ ಗೃಹಲಕ್ಷ್ಮಿ ಹಣದ ಬಗ್ಗೆ ಕೇಳಲು ಯಾವ ಅರ್ಹತೆ ಇದೆ ಎಂದು ಪ್ರಶ್ನಿಸಿದ್ದಾರೆ.

ನಗರದಲ್ಲಿಂದು ಮಾತನಾಡಿದ ಅವರು, ಗೃಹಲಕ್ಷ್ಮಿ ಹಣ ಬಂದಿಲ್ಲ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, :2 ತಿಂಗಳು ಗೃಹಲಕ್ಷ್ಮಿ ಹಣ ಬಂದಿಲ್ಲ ಎಂದು ಬಂಬಡ ಬಡಿದುಕೊಳ್ಳುತ್ತಿದ್ದಾರೆ.ಈ ವಿಚಾರದ ಕುರಿತು ಸದನದಲ್ಲಿ ಮುಖ್ಯಮಂತ್ರಿಗಳು ಉತ್ತರ ನೀಡಿದ್ದಾರೆ.ಇದುವರೆಗೂ 25 ತಿಂಗಳಲ್ಲಿ 23 ತಿಂಗಳು ಗೃಹಲಕ್ಷ್ಮಿ ಹಣ ನೀಡಿದ್ದೇವೆ. 2 ತಿಂಗಳು ಮಾತ್ರವೇ ಬಾಕಿಯಿರುವುದು.ಮುಂಬರುವ ದಿನಗಳಲ್ಲಿ ಅದನ್ನು ಪೂರ್ಣಗೊಳಿಸುತ್ತೇವೆ.ಬೇರೆ ರಾಜ್ಯಗಳಲ್ಲಿ ಎಲೆಕ್ಷನ್‌ಗೊಸ್ಕರ ಹಣ ನೀಡುತ್ತಿದ್ದಾರೆ. ಆದರೆ ಇದನ್ನು ಪ್ರಶ್ನೆ ಮಾಡಲು ಬಿಜೆಪಿಗರಿಗೇನು ನೈತಿಕತೆಯಿದೆ ಎಂದು ತಿರುಗೇಟನ್ನು ನೀಡಿದ್ದಾರೆ.

Leave a Reply

Your email address will not be published. Required fields are marked *