ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಹೆಚ್ಚು ಮಳೆಯಾಗುತ್ತಿರುವ ಕಾರನ ಜನರ ಜೀವನ ಅಸ್ತವ್ಯಸ್ತವಾಗಿದ್ದು ಜನರು ಪರದಾಡುವಂತಾಗಿದೆ. ನಗರಾದ್ಯಂತ ಸುರಿಯುತ್ತಿರುವ ಮಳೆಯ ಕಾರಣದಿಂದ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆಯು ತಿಳಿಸಿದೆ.
ಮುಂಜಾನೆಯಿಂದಲೇ ಸುರಿಯುತ್ತಿರುವ ಮಳೆಯಿಂದ ಟೆಕ್ ಪಾರ್ಕ್ ಸಂಪೂರ್ಣ ಮುಳುಗಿದ್ದು, 300 ಎಕರೆಯ ಟೆಕ್ ಗ್ರಾಮದ ರಸ್ತೆಗಳು ಮುಳುಗಿ ಕೆರೆಯಂತಾಗಿವೆ.
ಹೆಬ್ಬಾಳದ ಪ್ಲೈಒವರ್‌ನಲ್ಲಿ ಹೆಚ್ಚು ಟ್ರಾಫಿಕ್ ಜಾಮ್ ಆಗಿರುವುದರಿಂದ ಸಂಜೆಯ ವೇಲೆ ಮತ್ತಷ್ಟು ಹೆಚ್ಚಾಗಬಹುದು . ಕಚೇರಿಯಿಂದ ಬೇಗ ಹೊರಟರೆ ಟ್ರಾಫಿಕ್‌ಯಿಂದ ತಪ್ಪಿಸಿಕೊಳ್ಳಬಹುದು ಎಂಬ ಸಲಹೆಯನ್ನು ಹವಾಮಾನ ಬ್ಲಾಗರ್ ಬರೆದುಕೊಂಡಿರುವುದು ತಿಳಿದುಬಂದಿದೆ.