ಬೆಂಗಳೂರು:ಬಾರೀ ಮಳೆಯಿಂದಾಗಿ ಬೆಂಗಳೂರು ನಗರವೂ ನೀರಿನಿಂದ ಆವೃತವಾಗಿ ಬಾಗಶಃ ಕೆರೆಯಂತಾಗಿದೆ.

ಸಿಲಿಕಾನ್‌ ಸಿಟಿಯಲ್ಲಿಯೂ ನೀರು ತುಂಬಿ ರಸ್ತೆಗಳೆಲ್ಲಾ ಕರೆಯಂತಾಗಿರುವ ಕಾರಣ ವಾಹನಗಳ ಚಾಲನೆಗೆ ಹರಸಾಹಸ ಪಡುತ್ತಿದ್ದಾರೆ ರಾಜ್ಯ ಜನರು.

ಕೆಆರ್‌ಪುರಂ ನಲ್ಲಿರುವ ಸಾಯಿ ಲೇಔಟ್‌ನ ಮನೆಗಳಿಗೆ ನೀರು ನುಗ್ಗಿ ವಿದ್ಯುತ್‌ ಪಿಠೋಪಕರಣಗಳು, ಗೃಹಪಯೋಗಿ ವಸ್ತುಗಳು ಜಲಮಯವಾಗಿವೆ.ಮನೆಗಳಿಗೆಲ್ಲಾ ನೀರು ನುಗ್ಗಿ ಜನರಿಗೆ ಕುಡಿಯಲು ನೀರಿಲ್ಲದೆ , ಊಟವಿಲ್ಲದೆ ಪರದಅಡುವಂತಾಗಿದ್ದು, ಮಳೆಯ ಕಾರಣದಿಂದ ನಿಂತುಕೊಂಡೇ ಕಾಲ ಕಳೆಯುವ ಸ್ಥಿತಿ ಬಂದೊರಗಿದೆ.

ಬೆಂಗಳೂರಿನಾದ್ಯಂತ ಇನ್ನೂ ಮುರ್ನಾಲ್ಕು ದಿನಗಳೂ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದ್ದು ಜನರ ಸಹಾಯಕ್ಕಾಗಿ ಟೋಲ್‌ ಫ್ರೀ ನಂಬರ್ಗಳನ್ನು ಕೂಡಾ ಸಕ್ರಿಯವಾಗಿರುವಂತೆ ನೋಡಿಕೊಂಡಿದ್ದು 1533 ನಂಬರಿಗೆ ಕರೆಯನ್ನು ಮಾಡುವುದರ ಮೂಲಕ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬಹುದಾಗಿದೆ.

Leave a Reply

Your email address will not be published. Required fields are marked *