ತನ್ನ ಕರುಳು ಕುಡಿ ಈ ಲೋಕಕ್ಕೆ ಬರುವ ಮುಂಚೆಯೇ ತಂದೆ ಸಾವನ್ನಪ್ಪಿರುವ ಘಟನೆಯು ಸತಾರ ಜಿಲ್ಲೆಯಲ್ಲಿ ನಡೆದಿದ್ದು,ಈ ಹೃದಯ ಹಿಂಡುವ ಘಟನೆಗೆ ಗ್ರಾಮಸ್ಥರು ಕಣ್ಣೀರಿಟ್ಟಿದ್ದಾರೆ.

ಸತಾರ ಜಿಲ್ಲೆ ಪ್ರಮೋದ್‌ ಎಂಬುವವರು ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಇವರು 1 ವರ್ಷದ ಹಿಂದೆ ಮದುವೆಯಾಗಿದ್ದರು. ಇತ್ತೀಚೆಗೆ ರಜೆಗೆ ತನ್ನೂರಿಗೆ ಬಂದಿರ್ತಾರೆ.ಅಂತಹನ ಸಮಯದಲ್ಲಿ ಪತ್ನಿಯನ್ನು ಹೆರಿಗೆಗೆಂದು ಆಸ್ಪತ್ರೆಗೆ ದಾಖಲಿಸಿ ಮತ್ತೊಂದು ಕೆಲಸಕ್ಕೆಂದು ದ್ವಿಚಕ್ರ ವಾಹನದಲ್ಲಿ ಹೋಗುತ್ತಿರುವ ವೇಲೆಯಲ್ಲಿ ಅಪಘಾತ ಸಂಭವಿಸಿದ್ದು, ಗಂಭೀರ ಗಾಯಗೊಂಡಿರುವ ಪ್ರಮೋದ್‌ ಪ್ರಾಣ ಪಕ್ಷಿ ಹಾರಿಹೋಗಿದೆ ಎಂದು ತಿಳಿದುಬಂದಿದೆ.

ಯೋಧನ ಅಪಘಾತವಾದ ಕೆಲವೇ ಗಂಟೆಗಳಲ್ಲಿ ಪ್ರಮೋದ್‌ ಪತ್ನಿ ಹೆಣ್ಣು ಮಗುವಿಗೆ ಜನ್ಮವನ್ನು ನೀಡಿದ್ದಾರೆ.ತನ್ನ ಕಂದಮ್ಮನನ್ನು ನೋಡದ ತಂದೆ, ತಂದೆಯ ಮುಖವನ್ನು ನೋಡದ ಕಂದಮ್ಮನನ್ನು ನೋಡಿದರೆ ಕರುಳು ಕಿವುಚುತ್ತದೆ. ಮೃತಪಟ್ಟ ಪ್ರಮೋದ್‌ ಅಂತ್ಯಕ್ರಿಯೆಯನ್ನು ಮಿಲಿಟರಿ ಗೌರವಗಳೊಂದಿಗೆ ನೆರವೇರಿಸಲಿದ್ದು, ಪ್ರಮೋದ್‌ ಹೆಂಡತಿ ಅಂತ್ಯಕ್ರಿಯೆಗೆ ಸ್ಟ್ರೆಚರ್‌ ನಲ್ಲಿ ಬಂದಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

Leave a Reply

Your email address will not be published. Required fields are marked *