ಇತ್ತೀಚೆಗಿನ ದಿನಗಳಲ್ಲಿ ಪೋಷಕರನ್ನು ನಿರ್ಲಕ್ಷಿಸುವುದು, ಬೀದಿಗೆ ತಳ್ಳುವಂತಹ ಪ್ರಕರಣಗಳು ಹೆಚ್ಚು ನಡೆಯುತ್ತಿವೆ. ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿದ ತೆಲಂಗಾಣ ಸಿಎಂ ಎ.ರೇವಂತ್‌ರೆಡ್ಡಿ ಇಂದು ಮಾತನಾಡಿದ್ದಾರೆ.

ಹೆತ್ತ ತಾಯಿ-ತಂದೆಯನ್ನು ಬೀದಿಗೆ ತಳ್ಳಿದರೆ ಅಥವಾ ನಿರ್ಲಕ್ಷಿಸಿದರೆ ಸರ್ಕಾರಿ ನೌಕರರ ಸಂಬಳದಲ್ಲಿ 10% ಹಣವನ್ನು ಅವರ ಪೋಷಕರಿಗೆ ನೀಡುವ ಕಾನೂನನ್ನು ಅತಿ ಶೀಘ್ರದಲ್ಲಿ ಜಾರಿ ಮಾಡಲಾಗುತ್ತದೆ ಎಂದು ತೆಲಂಗಾಣ ಸಿಎಂ ಹೇಳಿದ್ದಾರೆ.

ರಾಜ್ಯದ ವೃದ್ದರು ಮತ್ತು ವಿಶೇಷ ಚೇತನರನ್ನು ರಕ್ಷಿಸಲು ಕಲ್ಯಾಣ ಕ್ರಮಗಳನ್ನು ಘೋಷಿಸಿದ ಬಳಿಕ ತೆಲಂಗಾಣ ಸಿಎಂ ವಯಸ್ಸಾದ ಪೋಷಕರು ನೀಡಿದ ದೂರುಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.

2026-2027ರ ಬಜೆಟ್ಟಿನಲ್ಲಿ ಹೊಸ ಆರೋಗ್ಯ ನೀತಿಯನ್ನು ಜಾರಿಗೆ ತಂದು ಉತ್ತಮ ಆರೋಗ್ಯವನ್ನು ಒದಗಿಸುತ್ತೇನೆ ಎಂದಿರುವ ಇವರು, ವಿಕಲ ಚೇತನರಿಗೆ ಮೋಟಾರು ವಾಹನಗಳು, ಬ್ಯಾಟಚಾಲಿತ ವಾಹನಗಳು ಶ್ರವಣ ಸಾಧನಗಳು, ಪೋನ್‌ಗಳು, ಇತರ ಉಪಕರಣಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.

ವಿಕಲಚೇತನರು ಎಲ್ಲರಂತೆ ಸ್ವಾಭಿಮಾನದಿಂದ ಬದುಕಲು ನಮ್ಮ ಸರ್ಕಾರ ಬೆಂಬಲಿಸುತ್ತದೆ ಎಂದು ರೇವಂತ್‌ ರೆಡ್ಡಿ ಹೇಳಿದ್ದಾರೆ.

Leave a Reply

Your email address will not be published. Required fields are marked *