ರಾಕಿಂಗ್‌ಸ್ಟಾರ್ ಯಶ್ ಅಭಿನಯಿಸಿರುವ ಟಾಕ್ಸಿಕ್ ಫಿಲಂ ಪೋಸ್ಟರ್ ರಿಲೀಸ್ ಆಗ್ತಿವೆ.ಇದೇ ಮಾರ್ಚ ತಿಂಗಳ 19ಕ್ಕೆ ಸಿನಿಮಾ ತೆರೆಕಾಣಲು ಸಿದ್ಧವಾಗುತ್ತಿದೆ. ಟಾಕ್ಸಿಕ್ ಸಿನಿಮಾದಲ್ಲಿ ಬರುವಂತಹ ಕ್ಯಾರೆಕ್ಟರ್‌ಗಳನ್ನು ಚಿತ್ರತಂಡ ಪರಿಚಯಿಸುತ್ತಿದೆ. ಟಾಕ್ಸಿಕ್ ಸಿನಿಮಾದಲ್ಲಿ ರೆಬೆಕಾ ಪಾತ್ರವನ್ನು ನಟಿ ತಾರಾ ಸುತಾರಿಯಾ ಮಾಡಲಿರುವ ಪೋಸ್ಟೊಂದನ್ನು ರಿವೀಲ್ ಮಾಡಿದೆ.
ಟಾಕ್ಸಿಕ್ ಸಿನಿಮಾದಲ್ಲಿ ಕಿಯಾರಾ ಅಡ್ವಾನಿಯಾ ನಡಿಯಾ ಪಾತ್ರವನ್ನು , ಹುಮಾ ಖುರೇಷಿಯವರ ಪಾತ್ರವಾದ ಎಲಿಜಬೆತ್ ಮತ್ತು ನಯನತಾರಾರವರ ಗಂಗಾ ಪಾತ್ರದ ಬಗ್ಗೆ ಇಗಾಗಲೇ ರಿವೀಲ್ ಆಗಿದೆ. ಚಲನಚಿತ್ರದ ಪಸ್ಟ್ ಲುಕ್ ಬಿಡುಗಡೆ ಮಾಡಿದ ಚಿತ್ರತಂಡ ಅಭಿಮಾನಿಗಳಿಗೆ ಸಂಭ್ರಮವನ್ನು ನೀಡಿದೆ.
ಯಶ್ ಮತ್ತು ಗೀತು ಮೋಗನ್‌ದಾಸ್ ನಟನೆಯಲ್ಲಿ ಮೂಡಿ ಬರುತ್ತಿರುವ ಟಾಕ್ಸಿಕ್ ಸಿನಿಮಾದ ಮೇಲೆ ಹೆಚ್ಚು ನಿರೀಕ್ಷಯಿದ್ದು, ದೇಶಾದ್ಯಂತ ಸಿನಿಮಾವನ್ನು ಬಿಡುಗಡೆ ಮಾಡಲು ಚಿತ್ರತಂಡ ಅದ್ದೂರಿ ಸಿದ್ದತೆಯನ್ನು ಮಾಡಿಕೊಳ್ಳುತ್ತಿದೆ.ತಮ್ಮ ನೆಚ್ಚಿನ ನಟನ ಆಕ್ಟಿಂಗ್ ನೋಡಲು ಅಭಿಮಾನಿಗಳು ಕಾದು ಕುಳಿತಿದ್ದಾರೆ.
