ಬೆಂಗಳೂರು: ಎರಡು ತಿಂಗಳಿಂದ ಗೃಹಲಕ್ಷ್ಮಿ ಹಣ ನೀಡಿಲ್ಲ ಎಂದು ಮಹಿಳೆಯರು ಸಾಮಾಜಿಕ ಜಾಲಾತಾಣಗಳಲ್ಲಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. 2 ತಿಂಗಳ ಗೃಹಲಕ್ಷ್ಮೀ ಹಣ ಎಲ್ಲಿ ಹೋಯ್ತು. ಈ ಪ್ರಶ್ನೆಗೆ ಉತ್ತರ ನೀಡುವವರೆಗೂ ನಾವು ಹೋರಾಟ ಮಾಡುತ್ತೇವೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿಕೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಸಿಎಂ ಕುರ್ಚಿಗಾಗಿ ಕದನ ನಡೆಸುತ್ತಾ ಆ ಕೆಲಸದಲ್ಲಿ ನಿರತರಾಗಿ ಮಹಿಳೆಯರಿಗೆ ನೀಡಬೇಕಾದ 1 ಕೋಟಿ 26 ಲಕ್ಷ ಗೃಹಲಕ್ಷ್ಮಿ ಹಣ ಎಲ್ಲಿ ಹೋಯ್ತು? ಫಲಾನುಭವಿಗಳಿಗೆ ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯನವರ ಆಡಳಿತದ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ದ್ವೇಷ ಭಾಷಣ ಮಾಡಲು ವಿರೋಧ ಪಕ್ಷದವರಿಗೆ , ಮಾಧ್ಯಮದವರಿಗೆ, ಅವಕಾಶ ಕೊಡದೆ ಸಂವಿಧಾನ ನಮಗೆ ನೀಡಿರುವ ವಾಕ್ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಉಪಾಯವಾಗಿದೆ.ರಾಜ್ಯಪಾಲರು ಡಿ.29ಕ್ಕೆ ಬೆಂಗಳೂರಿಗೆ ಬಂದಾಗ ಈ ವಿದೇಯಕ್ಕೆ ತಡೆಯನ್ನು ನೀಡುವಂತೆ ಮನವಿಯನ್ನು ಮಾಡುತ್ತೇವೆ ಎಂದಿದ್ದಾರೆ.
