ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸಿಎಂ ಕುರ್ಚಿಯ ಕದನ ನಡೆಯುತ್ತಿದ್ದು, ಯಾರು ಸಿಎಂ ಅಲಂಕರಿಸುತ್ತಾರೆ? ಯಾರು ಮುಂದುವರೆಯುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.ಸಿಎಂ ಬದಲಾವಣೆಯ ವಿಚಾರದಲ್ಲಿ ಪರ ವಿರೋಧದ ಚರ್ಚೆಗಳು ನಡೆಯುತ್ತಿದ್ದು, ಈ ವಿಚಾರ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರದ ಮೇಲೆ ನಿಂತಿದೆ.
ಸಿದ್ದರಾಮಯ್ಯನವರ ಪರ ಕೆಲವರು ಬ್ಯಾಟಿಂಗ್ ಮಾಡಿದ್ರೆ ಡಿಕೆಶಿ ಪರ ಮತ್ತೆ ಕೆಲವರು ಬ್ಯಾಟಿಂಗ್ ಮಾಡುತ್ತಿದ್ದಾರೆ.
ಸಿಎಂ ಬದಲಾವಣೆಯ ವಿಚಾರವಾಗಿಯೇ ಸಿದ್ದರಾಮಯ್ಯನವರ ಕಾವೇರಿ ನಿವಾಸದಲ್ಲಿ ರಾಜಕೀಯ ನಾಯಕರು, ಶಾಸಕರ, ದಂಡು ಜಮಾಯಿಸುತ್ತಿದ್ದು, ಸಿಎಂ ನಿವಾಸದಲ್ಲಿ ರಾಜಕೀಯ ಗರಿಗೆದರಿದೆ ಎನ್ನಲಾಗಿದೆ. ಸಿಎಂ ಸಿದ್ದರಾಮಯ್ಯನ ನಿವಾಸದಲ್ಲಿ ಸಚಿವರಾದ ಡಾ.ಜಿ.ಪರಮೇಶ್ವರ್, ಹೆಚ್.ಸಿ.ಮಹದೇವಪ್ಪ, ಸಿಂಧನೂರ್ ಶಾಸಕ ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು ಎನ್ನಲಾಗಿದೆ.
