ಬೆಂಗಳೂರು: ರಾಜ್ಯಕ್ಕೆ ಮುಖ್ಯಮಂತ್ರಿಯಾಗಬೇಕೆಂದು ಯಾರಿಗೆ ತಾನೇ ಇಷ್ಟವಿರುವುದಿಲ್ಲ. ಹಾಗೆಯೇ ಸಿಎಂ ಬದಲಾವಣೆಯ ವಿಚಾರವಾಗಿ ಚರ್ಚೆಗಳು ನಡೆಯುತ್ತಲೇ ಇದೆ.ಎಲ್ಲಾ ಶಾಸಕರು, ಎಲ್ಲಾ ಸಚಿವರು ನಾವು ಸಿಎಂ ಆಗಬೇಕು ಎಂದು ತುದಿಗಾಲಿನಲ್ಲಿ ನಿಂತಿರುತ್ತಾರೆ.ಎಲ್ಲರಿಗೂ ಸಿಎಂ ಆಗ್ಬೇಕು ಎನ್ನುವ ಆಸೆಯಿರುವುದು ಸಹಜ ಎಂದು ಸಚಿವ ಶಿವಾನಂದ ಪಾಟೀಲ್ ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ಶಾಸಕರಿಗೂ, ಸಚಿವರಿಗೂ ಸಿಎಂ ಪಟ್ಟವನ್ನು ಅಲಂಕರಿಸಬೇಕೆನ್ನುವ ಆಸೆ ಇದ್ದೆ ಇರುತ್ತದೆ. ಆದ್ರೆ ನಮ್ಮ ಪಕ್ಷದ ಹಿರಿಯ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ ಸಿಎಂ ಸ್ಥಾನಕ್ಕೆ ಸೂಕ್ತವಾದ ವ್ಯಕ್ತಿ ಎಂದು ಸ್ಪೋಟಕ ಹೇಳಿಕೆಯನ್ನು ನೀಡಿ ಎಲ್ಲರಲ್ಲೂ ಕುತೂಹಲವನ್ನು ಹುಟ್ಟು ಹಾಕಿದ್ದಾರೆ.
ಮಲ್ಲಿಕಾರ್ಜುನ ಖರ್ಗೆಯವರ ವಿಚಾರದಲ್ಲಿ ನಾನು ತಪ್ಪು ಮಾತನಾಡಿದ್ದೇ ನನ್ನ ತಪ್ಪನ್ನು ನಾನು ಒಪ್ಪಿಕೊಳ್ಳುತ್ತೇನೆ. ಸಿಎಂ ಆಗಲು ಮಲ್ಲಿಕಾರ್ಜುನ ಖರ್ಗೆಯವರು ಸೂಕ್ತವಾದ ವ್ಯಕ್ತಿ ಅವರೇ ಸಿಎಂ ಆಗ್ಬೇಕು ಎಂದು ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ.
