ಬೆಂಗಳೂರು: ಸೋಷಿಯಲ್ ಮೀಡಿಯಾಗಳಲ್ಲಿ ಟೀಕೆ ಮಾಡುವವರ ಹೆಸರುಗಳನ್ನು ಪ್ರಸ್ಥಾಪಿಸಿ ಅವರುಗಳನ್ನು ನಾಯಕರನ್ನಾಗಿ ಮಾಡುವುದು ಬೇಡ ಎಂದು ಡಿಸಿಎಂ ಡಿಕೆಶಿವಕುಮಾರ್ ಹೇಳಿದ್ದಾರೆ.
ವಿಧಾನಸಭೆಯ ಪ್ರಶ್ನೋತ್ತರ ಕಲಾಪದ ವೇಳೆಯಲ್ಲಿ ಬಿಜೆಪಿ ಶಾಸಕ ಎಸ್.ವಿಶ್ವನಾಥ್ ಸಾಮಾಜಿಕ ಜಾಲಾತಾಣದಲ್ಲಿ ಕೆಲವರು ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ ನನ್ನ ಹಕ್ಕುಚ್ಯುತಿ ಮಾಡುತ್ತಿದ್ದಾರೆ.ಆದ್ದರಿಂದ ನನ್ನ ಹಕ್ಕುಚ್ಯುತಿ ನಿರ್ಣಯವನ್ನು ಮಂಡಿಸುತ್ತೇನೆ ಎಂದಿದ್ದಾರೆ. ಈ ಸಮಯದಲ್ಲಿ ವಿರೋಧ ಪಕ್ಷದ ಶಾಸಕರು, ಕೆಲವರು ಸಿಎಂ ರನ್ನು ಕೊಲೆಗಡುಕ ಎಂದರೂ ಸರ್ಕಾರ ಸುಮ್ಮನೆ ಇದೆ ಎಂದು ಧ್ವನಿಗೊಡಿಸಿದ್ದಾರೆ.
ಈ ವೇಳೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ಯಾರು ಯಾರು ಯಾವ ಯಾವ ಹೇಳಿಕೆಗಳನ್ನು ನೀಡಿದ್ದಾರೆಂದು ನಾನು ನೋಡಿದ್ದೇನೆ.ಸಿಎಂ ರನ್ನು ಕೊಲೆಗಡುಕರು ಎಂದಿರುವುದನ್ನು ನೋಡಿದ್ದೇನೆ.ನಿಮ್ಮ ಪಕ್ಷದ ಕಾರ್ಯದರ್ಶಿಮತ್ತು ಪ್ರಧಾನ ಕಾರ್ಯದರ್ಶಿ ಮಾತನಾಡಿರುವುದು ನಮ್ಮ ಮೊಬೈಲಿನಲ್ಲಿದೆ.ಹೀಗೆ ಹೇಳಿಕೆಗಳನ್ನು ನೀಡುವವರ ಬಗ್ಗೆ ಸದನದಲ್ಲಿ ಪ್ರಸ್ಥಾಪಿಸಿ ಅವರನ್ನು ನಾಯಕರನ್ನಾಗಿ ಮಾಡುವುದು ಬೇಡ. ಈ ವಿಚಾರದ ಬಗ್ಗೆ ಗೃಹಮಂತ್ರಿಗಳು ಹೇಳುವುದನ್ನು ಕೇಳೋಣ ಎಂದಿದ್ದಾರೆ.
