ಮುಂಬೈ: ವಿರಾಟ್ ಕೊಹ್ಲಿ ಅವರು ಬರೋಬ್ಬರಿ 1,403 ದಿನಗಳ ಸುದೀರ್ಘ ಕಾಯುವಿಕೆಯ ನಂತರ ಮತ್ತೆ ಏಕದಿನ ಕ್ರಿಕೆಟ್‌ನ ODI ವಿಶ್ವದ ನಂ.1 ಬ್ಯಾಟರ್ ಆಗಿ ಹೊರಹೊಮ್ಮಿರುವುದು ಕ್ರಿಕೆಟ್ ಲೋಕದ ದೊಡ್ಡ ಐತಿಹಾಸಿಕ ಸಾಧನೆಯಾಗಿದೆ.
ವಿರಾಟ್ ಕೊಹ್ಲಿ ಅವರು ಕೊನೆಯ ಬಾರಿಗೆ ಜುಲೈ 2021 ರಲ್ಲಿ ನಂ.1 ಸ್ಥಾನದಲ್ಲಿದ್ದರು. ನಂತರ ಪಾಕಿಸ್ತಾನದ ಬಾಬರ್ ಅಜಮ್ ಮತ್ತು ಇತ್ತೀಚೆಗೆ ರೋಹಿತ್ ಶರ್ಮಾ ಈ ಸ್ಥಾನವನ್ನು ಅಲಂಕರಿಸಿದ್ದರು. ಸುಮಾರು 4 ವರ್ಷಗಳ ನಂತರ 1,403 ದಿನಗಳು ಮತ್ತೆ ಅಗ್ರಸ್ಥಾನಕ್ಕೇರಿರುವುದು ಅವರ ‘ರನ್ ಮಷಿನ್’ ಖ್ಯಾತಿಗೆ ಸಾಕ್ಷಿಯಾಗಿದೆ.

ಜನವರಿ 2026ರಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಕೊಹ್ಲಿ ಅಮೋಘ ಪ್ರದರ್ಶನ ನೀಡಿದರು.ಕೇವಲ 91 ಎಸೆತಗಳಲ್ಲಿ 93 ರನ್ ಗಳಿಸುವ ಮೂಲಕ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.ಕಳೆದ ಐದು ಇನಿಂಗ್ಸ್‌ಗಳಲ್ಲಿ ಅವರ ಸ್ಕೋರ್‌ಗಳು ಹೀಗಿವೆ: 74, 135, 102, 65 ಮತ್ತು 93. ಈ ಅದ್ಭುತ ಸ್ಥಿರತೆಯೇ ಅವರನ್ನು ನಂ.1 ಪೀಠಕ್ಕೆ ತಂದು ಕೂರಿಸಿದೆ.

ವಿರಾಟ್ರವರ ರೇಟಿಂಗ್ ಪಾಯಿಂಟ್ಸ್ 785 ಇದ್ದು,ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ.ನ್ಯೂಜಿಲೆಂಡ್‌ನ ಡ್ಯಾರಿಲ್ ಮಿಚೆಲ್ 784 ಪಾಯಿಂಟ್ಸ್ಯಿದ್ದ, ಕೇವಲ ಒಂದು ಅಂಕದ ಅಂತರದಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ ಮೂರನೇ ಸ್ಥಾನಕ್ಕೆ ಇಳಿದಿದ್ದಾರೆ.

11ನೇ ಬಾರಿ ಅಗ್ರಸ್ಥಾನ: ಇದು ಕೊಹ್ಲಿ ಅವರ ವೃತ್ತಿಜೀವನದಲ್ಲಿ 11ನೇ ಬಾರಿಗೆ ನಂ.1 ಸ್ಥಾನಕ್ಕೇರಿರುವ ದಾಖಲೆ.
ಅತಿ ಹೆಚ್ಚು ದಿನಗಳು: ಭಾರತದ ಪರ ಅತಿ ಹೆಚ್ಚು ದಿನಗಳ ಕಾಲ ಒಟ್ಟು 825+ ದಿನಗಳು ನಂ.1 ಸ್ಥಾನದಲ್ಲಿದ್ದ ಬ್ಯಾಟರ್ ಎಂಬ ಹೆಗ್ಗಳಿಕೆ ಈಗಲೂ ಕೊಹ್ಲಿ ಹೆಸರಿನಲ್ಲಿದೆ.
ಸಚಿನ್ ದಾಖಲೆಯ ಹತ್ತಿರ: ಇದೇ ಪಂದ್ಯದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ನಂತರದ ಎರಡನೇ ಸ್ಥಾನಕ್ಕೆ ಕೊಹ್ಲಿ ಏರಿದ್ದಾರೆ.
