ಬಿಗ್‌ಬಾಸ್‌ ಮನೆಯಲ್ಲಿ ತಮ್ಮ ಟ್ಯಾಲೆಂಟ್‌ ಮೂಲಕ ಜನರ ಮನಸ್ಸನ್ನು ಗೆದ್ದು, ಎಲ್ಲರ ಫೇವ್‌ರೇಟ್‌ ಆಗಿರುವಂತಹ ಗಿಲ್ಲಿ ಇಲ್ಲಿಯವರೆಗೂ ಕ್ಯಾಪ್ಟನ್‌ ಪಟ್ಟವನ್ನು ತೆಗೆದುಕೊಂಡಿರುವುದಿಲ್ಲವೆನ್ನುವ ಕೊರಗು ಗಿಲ್ಲಿ ನಟನಿಗೆ ಕಾಡುತ್ತಿತ್ತು.

ಫ್ಯಾಮಿಲಿ ವೀಕ್‌ ಆಗಿದ್ದರಿಂದ ಸ್ಪರ್ಧಿಗಳು ತಮ್ಮ ಕುಟುಂಬದವರೊಟ್ಟಿಗೆ ಆಟ, ಊಟ, ಟಾಸ್ಕ್‌ಗಳನ್ನು ಮಾಡಿಕೊಂಡು ಸ್ವಲ್ಪ ರಿಲ್ಯಾಕ್ಸ್‌ ಆಗಿದ್ದರು. ಬಿಗ್‌ಬಾಸ್‌ ಮನೆಯ ಸ್ಪರ್ಧಿಗಳ ಕುಟುಂಬದವರಿಗೆ ಕ್ಯಾಪ್ಟನ್‌ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಬಿಗ್‌ಬಾಸ್‌ ಅನುಮತಿಯನ್ನು ನೀಡಿತು. ಅಂತೆಯೇ ಕುಟುಂಬದವರು ಗಿಲ್ಲಿ ಮತ್ತು ಅಶ್ವಿನಿಯವರಿಗೆ ಹೆಚ್ಚಿನ ಮತಗಳನ್ನು ನೀಡಿದರು. ಮತಗಳನ್ನು ಕೂಡಿಸಿದಾಗ ಗಿಲ್ಲಿಗೆ ಹೆಚ್ಚು ಮತಗಳು ಲಭಿಸಿದವು. ಇನ್ನೂ ಗಿಲ್ಲಿ ಕ್ಯಾಪ್ಟನ್‌ ಎಂದು ಎಲ್ಲರೂ ಅಂದುಕೊಂಡಿರುವಾಗಲೇ ಬಿಗ್‌ಬಾಸ್‌ ಮತ್ತೊಂದು ಟ್ವೀಸ್ಟ್‌ ನೀಡಿದೆ. ಅದೆನಂದ್ರೆ ಗಿಲ್ಲಿ ಅಶ್ವಿನಿ ನಡುವೆಯೊಂದು ಟಾಸ್ಕ್‌ ನೀಡಿಲಾಗಿದ್ದು, ಬಿಗ್‌ಬಾಸ್‌ ಕೊಟ್ಟಿರುವ ಟಾಸ್ಕಿನಲ್ಲಿ ಗಿಲ್ಲಿ ಗೆದ್ದು ಕ್ಯಾಪ್ಟನ್‌ ಪಟ್ಟವನ್ನು ಅಲಂಕರಿಸಿದ್ದಾರೆ.

ಗಿಲ್ಲಿ ಕ್ಯಾಪ್ಟನ್‌ ಆಗುತ್ತಿದ್ದಂತೆ ಅವನ ಅಟಿಟ್ಯೂಡ್‌  ಅಂಡ್‌ ಲುಕ್‌ ಚೆಂಜ್‌ ಆಗಿದೆ. ಹಣೆಗೆ ಬೊಟ್ಟು ಇಟ್ಟುಕೊಂಡು, ಕೊರಳಿಗೆ ಹಾಗೂ ಕೈಗಳಿಗೆ ಬೆಲ್ಳಿ ಚೈನ್‌ ಹಾಕ್ಕೊಂಡು ಪಂಚೆ ಉಟ್ಕೊಂಡು ಖಡಕ್‌ ಲುಕ್ಕಿನಲ್ಲಿ ಎಂಟ್ರಿ ನೀಡಿದ್ದಾರೆ.ಗಿಲ್ಲಿ ನಟ ಕ್ಯಾಪ್ಟನ್‌ ಆಗಿರುವುದು ಅವರ ಅಭಿಮಾನಿಗಳಲ್ಲಿ ಹೆಚ್ಚು ಸಂತೋಷವನ್ನುಂಟು ಮಾಡಿದೆ. ನೋಡೋಣ ಗಿಲ್ಲಿ ಕ್ಯಾಪ್ಟನ್‌ ಆಗಿ ದೊಡ್ಮನೆಯನ್ನು ಹೇಗೆ ನಿಬಾಯಿಸುತ್ತಾರೆ ಎಂಬುದನ್ನು ಕಾದು ನೋಡೋಣ.

Leave a Reply

Your email address will not be published. Required fields are marked *