ಬಿಗ್‌ಬಾಸ್ ಮನೆಗೆ ಸುದೀಪ್ ನೋ ಎಂಟ್ರಿ, ಅದರ ಜೊತೆಗೆ ಡಬಲ್ ಎಲಿಮಿನೇಷನ್ ಇರುವುದರಿಂದ ಸ್ಪರ್ಧಿಗಳು ಶಾಕ್ ಆಗಿದ್ದಾರೆ.
ಬಿಗ್‌ಬಾಸ್ ಮನೆಯಲ್ಲಿ ವಾರ ಪೂರ್ತಿ ಸ್ಪರ್ಧಿಗಳು ಟಾಸ್ಕ್, ಕಿತ್ತಾಟ,ಮುನಿಸು ಹೀಗೆ ಎಲ್ಲಾ ಡ್ರಾಮಗಳಿಗೂ ಶನಿವಾರ ಮತ್ತು ಬಾನುವಾರ ವಾರದ ಕಥೆ ಕಿಚ್ಚ ಸುದೀಪ್ ಜೊತೆ ಎನ್ನುವುದು ಖಾಯಂ ಆಗಿತ್ತು.ಆದರೆ ಈ ವಾರ ಅವರ ಸಿನಿಮಾ ಬಿಡುಗಡೆಯಾಗಿರುವುದರಿಂದ ಸುದೀಪ್ ಈ ವಾರ ಕಾರ್ಯಕ್ರಮ ನಡೆಸಿಕೊಡುವುದಿಲ್ಲವೆಂದು ತಿಳಿದುಬಂದಿದೆ.

ಫ್ಯಾಮಿಲಿ ವೀಕ್ ಆಗಿದ್ದರಿಂದ ಸ್ಪರ್ಧಿಗಳು ಸ್ವಲ್ಪ ಆರಾಮಾಗಿದ್ದರು.ಆದರೆ ಡಬಲ್ ಎಲಿಮಿನೇಷನ್ ವಿಷಯ ತಿಳಿಯುತ್ತದ್ದಂತೆ ಸ್ಪರ್ಧಿಗಳು ಶಾಕ್ ಆಗಿದ್ದಾರೆ. ಯಾರು ಯಾರು ಎಲಿಮಿನೇಟೆಡ್ ಆಗಿ ತಮ್ಮ ಆಟವನ್ನು ಮುಗಿಸಿ ಮನೆಗೆ ಹೋಗ್ತಾರೆ ಎಂದು ಟೆಂಕ್ಷನ್ ಮಾಡಿಕೊಂಡಿದ್ದಾರೆ.

ಕಿಚ್ಚ ಸುದೀಪ್ ನಟನೆಯ ಮಾರ್ಕ್ ಸಿನಿಮಾ ಬಿಡುಗಡೆಯಲ್ಲಿ ಬ್ಯುಸಿಯಲ್ಲಿರುವುದರಿಂದ ಈ ವಾರ ಕಿಚ್ಚ ಸುದೀಪ್ ಬರುವುದಿಲ್ಲ. ಆದ್ದರಿಂದ ಕನ್ನಡ ಚಲನಚಿತ್ರದ ಜೋಗಿ ಪ್ರೇಮ್, ರೀಷ್ಮಾ ನಾಣಯ್ಯ ಬಂದಿದ್ದಾರೆ.

ಭಾಗ್ಯಲಕ್ಷ್ಮಿ ಧಾರಾವಾಹಿಯ ಭಾಗ್ಯ ಹಾಗೂ ತಾಂಡವ್ ದೊಡ್ಮನೆಗೆ ಆಗಮನವಾಗಿದ್ದಾರೆ. ಇವರ ಸಮ್ಮುಖದಲ್ಲಿ ಸ್ಪರ್ಧಿಗಳ ಎಲಿಮಿನೇಷನ್ ನಡೆಯಲಿದೆ ಎನ್ನಲಾಗಿದೆ.

ದೊಡ್ಮನೆಗೆ ಜೋಗಿ ಪ್ರೇಮ್, ಬಿಗ್‌ಬಾಸ್ ಮಾರ್ಗದರ್ಶನದಂತೆ ಯಾರನ್ನು ಕರ್ಕೊಂಡು ಹೋಗ್ಬೇಕು ಎಂದು ಸೂಚನೆ ನೀಡುತ್ತಾರೋ ಅವರನ್ನು ನಾನು ಕರೆದುಕೊಂಡು ಹೋಗುತ್ತೇನೆ ಎಂದು ಜೋಗಿ ಪ್ರೇಮ್ ಹೇಳಿದ್ದಾರೆ.
