ಬೆಂಗಳೂರು: ರಾಜ್ಯದ ರೇಷನ್ಕಾರ್ಡಿನಲ್ಲಿ ಅಕ್ಕಿಯ ಬದಲಾಗಿ ಆಹಾರ ಕಿಟ್ ನೀಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ ಎಂದು ತಿಳಿದುಬಂದಿದೆ.
ಇಂದು ನಡೆದಿರುವ ಸಚಿವ ಸಂಪುಟದ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಂಡಿದೆ. ಇಷ್ಟು ದಿನ ನೀಡುತ್ತಿದ್ದ ಅಕ್ಕಿಯ ಬದಲಾಗಿ ದಿನನಿತ್ಯದ ವಸ್ತುಗಳು ಇರಲಿವೆ ಎನ್ನುವ ಮಾಹಿತಿಯಿದೆ. ಮುಂದಿನ ಸಲ ರೇಷನ್ ತೆಗೆದುಕೊಳ್ಳಬೇಕಾದರೆ ಆಹಾರ ಕಿಟ್ ಸಿಗಲಿದೆ ಎನ್ನಲಾಗಿದೆ.
ಈ ಆಹಾರ ಕಿಟ್ನಲ್ಲಿ ತೊಗರಿಬೇಳೆ, ಕಾಫಿಪುಡಿ, ಟೀಪುಡಿ, ಅಡುಗೆ ಎಣ್ಣೆ, ಉಪ್ಪು, ಸಕ್ಕರೆ, ಗೋಧಿ ಮುಂತಾದ ಪದಾರ್ಥಗಳಿವೆ ಎನ್ನಲಾಗಿದೆ.
