ಬೆಂಗಳೂರು:ಅಶ್ಲೀಲ ಕಮೆಂಟ್ ಮಾಡಿರುವ ಪ್ರಕರಣದ ವಿಚಾರಣೆಗಾಗಿ ವಿಜಯಲಕ್ಷ್ಮಿ ದರ್ಶನ್‌ಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಾರೆ.

ಸಾಮಾಜಿಕ ಜಾಲಾತಾಣದಲ್ಲಿ ವಿಜಯಲಕ್ಷ್ಮಿ ದರ್ಶನ್‌ಗೆ ಅಶ್ಲೀಲವಾಗಿ ಮೆಸೆಜ್ ಮಾಡಿರುವ ಪ್ರಕರನದಲ್ಲಿ ಪೊಲೀಸರು 8 ಆರೋಪಿಗಳನ್ನು ಅರೆಸ್ಟ್ ಮಾಡಿದ್ದು, ಪ್ರಕರಣದ ತನಿಖೆಗೆ ಹಾಜರಾಗುವಂತೆ ವಿಜಯಲಕ್ಷ್ಮಿ ದರ್ಶನ್‌ಗೆ ಸಿಸಿಬಿ ಪೊಲೀಸರು ನೋಡಿಸ್ ನೀಡಿದ್ದಾರೆ.

ಕೋರ್ಟಿನಲ್ಲಿ ನ್ಯಾಯಾಧೀಶರ ಹೇಳಿಕೆಗಳನ್ನು ದಾಖಲಿಸಬೇಕೆಂದು ಉಲ್ಲೇಖವಾಗಿದೆ. ಅಶ್ಲೀಲ ಕಮೆಂಟ್ ಮಾಡುವ ಕಿಡಿಗೇಡಿಗಳ ವಿರುದ್ದ ನಗರದ ಸಿಸಿಬಿ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದರು. ಆದ್ದರಿಂದ 8 ಕಿಡಿಗೇಡಿಗಳನ್ನು ಬಂಧಿಸಿದ್ದಾರೆ.

ವಿಜಯಲಕ್ಷ್ಮಿ ದರ್ಶನ್‌ಗೆ ಸೋಷಿಯಲ್ ಮೀಡಿಯಾದಲ್ಲಿ ಕೆಟ್ಟ ಕೆಟ್ಟ ಕಮೆಂಟ್ ಮಾಡುವವರ ವಿರದ್ದ ಸಮರ ಸಾರಲು ಪೊಲೀಸರು 3 ವಿಶೇಷ ತಂಡಗಳನ್ನು ರಚಿಸಿದ್ದರು.ಇದೀಗ 8 ಆರೋಪಿಗಳು ಬಂಧನವಾಗಿದ್ದಾರೆ.
