ನವದೆಹಲಿ: ರಾಷ್ಟ್ರಗೀತೆಯ ರೀತಿಯಲ್ಲಿ ಸರ್ಕಾರಿ ಕಾರ್ಯಕ್ರಮಗಳಲ್ಲಿ , ಶಾಲೆಗಳಲ್ಲಿ ಕಡ್ಡಾಯವಾಗಿ ʼವಂದೇ ಮಾತರಂʼ ಗೀತೆಯನ್ನು ಹಾಡುವುದು ಕಡ್ಡಾಯ ಎಂದು ಕೇಂದ್ರ ಗೃಹಸಚಿವಾಲಯವು ಆದೇಶವನ್ನು ಹೊರಡಿಸಿದೆ ಎನ್ನಲಾಗಿದೆ.

ಗಾಯನದ ಸಮಯ ಮತ್ತು ಕ್ರಮ: ರಾಷ್ಟ್ರಗೀತೆಗೂ ಮುನ್ನ ‘ವಂದೇ ಮಾತರಂ’ನ ಆಯ್ದ 6 ಚರಣಗಳನ್ನು ಸುಮಾರು 3 ನಿಮಿಷ 10 ಸೆಕೆಂಡ್‌ಗಳ ಕಾಲ ಹಾಡಬೇಕು. ಇದನ್ನು ಹಾಡುವಾಗ ಅಥವಾ ನುಡಿಸುವಾಗ ಎಲ್ಲರೂ ಗೌರವಪೂರ್ವಕವಾಗಿ ಎದ್ದು ನಿಲ್ಲುವುದು ಕಡ್ಡಾಯ.

ಅವಕಾಶಗಳು: ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭಗಳು, ರಾಷ್ಟ್ರಪತಿಯವರು ಭಾಗವಹಿಸುವ ನಾಗರಿಕ ಕಾರ್ಯಕ್ರಮಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಿಗದಿತ ಮಾರ್ಗಸೂಚಿಯಂತೆ ಇದನ್ನು ಬಳಸಬೇಕು.

ಗೌರವ ಮತ್ತು ಶಿಕ್ಷೆ: ರಾಷ್ಟ್ರಗೀತೆಗೆ ಅಪಮಾನ ಮಾಡುವುದು ಅಥವಾ ಅಡ್ಡಿಪಡಿಸುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಇಂತಹ ಕೃತ್ಯವೆಸಗುವವರಿಗೆ 3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ.

ಐತಿಹಾಸಿಕ ಹಿನ್ನೆಲೆ ಮತ್ತು ವಿವಾದ: 2025ರ ಡಿಸೆಂಬರ್ ವೇಳೆಗೆ ‘ವಂದೇ ಮಾತರಂ’ ಗೀತೆಗೆ 150 ವರ್ಷ ತುಂಬಲಿದೆ. 1937ರಲ್ಲಿ ಕಾಂಗ್ರೆಸ್ ಪಕ್ಷವು ಈ ಗೀತೆಯ ಕೆಲವು ಪ್ರಮುಖ ಸಾಲುಗಳನ್ನು ಕೈಬಿಟ್ಟಿತ್ತು, ಇದು ದೇಶ ವಿಭಜನೆಯ ಬೀಜ ಬಿತ್ತಲು ಕಾರಣವಾಯಿತು ಎಂದು ಪ್ರಧಾನಿ ಮೋದಿ ಈ ಹಿಂದೆ ಟೀಕಿಸಿದ್ದರು ಎಂಬ ಅಂಶವೂ ಇಲ್ಲಿದೆ.

Leave a Reply

Your email address will not be published. Required fields are marked *