ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಜೈಲು ಕಂಬಿ ಎಣಿಸಿದ ದರ್ಶನ್‌ಗೆ ಈಗ ದೊಡ್ಡ ರಿಲೀಫ್ ಸಿಕ್ಕಿದ್ದು,ವಿಷಯ ತಿಳಿದ ಪವಿತ್ರಾಗೌಡ ಸಂತಸಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ದರ್ಶನ್‌ಗೆ ಬೇಲ್ ಸಿಕ್ಕಿರುವುದರಿಂದ ನನಗೆ ತುಂಬಾ ಖುಷಿಯಾಗಿದೆ.ನನಿಂದ ಜೈಲು ಸೇರುವ ಹಾಗೆ ಆಯಿತಲ್ಲ ಎಂದು ತುಂಬಾ ಬೇಸರವಿತ್ತು. ಸದ್ಯ ಬೇಲ್ ಸಿಕ್ಕಿದೆಯಲ್ಲ.ನನಗೆ ತುಂಬಾ ಸಂತೋಷವಾಯಿತು ಎಂದು ಪವಿತ್ರಾಗೌಡ ಜೈಲಿನ ಸಿಬ್ಬಂದಿಗಳ ಜೊತೆ ಮಾತನಾಡಿದ್ದಾರೆ.
ದರ್ಶನ್‌ಗೆ 6 ವಾರಗಳ ಮಧ್ಯಂತರ ಜಾಮೀನನ್ನು ಮಾತ್ರ ಹೈಕೋರ್ಟ್ ನೀಡಿದೆ.ಆರೋಗ್ಯ ತಪಾಸಣೆಯ ಮತ್ತು ಚಿಕಿತ್ಸೆಯ ವಿವರಗಳನ್ನು ಕೋರ್ಟಿಗೆ ಸಬ್‌ಮಿಟ್ ಮಾಡುವಂತೆ ಹೈಕೊರ್ಟಿನ ನ್ಯಾಯಮೂರ್ತಿಗಳು ಸೂಚನೆಯನ್ನು ನೀಡಿ, ಷರತ್ತುಬದ್ದ ಜಾಮೀನು ಮಂಜೂರು ಮಾಡಿದೆ. ಸತತ 5 ತಿಂಗಳ ಜೈಲು ವಾಸದ ನಂತರ ಜಾಮೀನು ಸಿಕ್ಕಿರುವ ಹಿನ್ನೆಲೆ ದರ್ಶನ್ ಸಂತೋಷಪಟ್ಟಿದ್ದಾರೆ.