ಚಳಿಗಾಲದಲ್ಲಿ ಗಾಳಿಯಲ್ಲಿನ ತೇವಾಂಶ ಕಡಿಮೆಯಾಗುವುದರಿಂದ ಚರ್ಮವು ತನ್ನ ನೈಸರ್ಗಿಕ ಎಣ್ಣೆಯನ್ನು ಕಳೆದುಕೊಂಡು ಒಣಗುತ್ತದೆ ಮತ್ತು ಕಳೆಗುಂದುತ್ತದೆ. ಆದ್ದರಿಂದ ಯಾವುದೇ ಕೆಮಿಕಲ್‌ ಇಲ್ಲದೇ ಮನೆಯಲ್ಲಿ ಸಿಗುವಂತಹ ವಸ್ತುಗಳನ್ನು ಬಳಸಿಕೊಂಡು ನಮ್ಮ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕಯುಕ್ತ ಟೋನರ್‌ಗಳು ಚರ್ಮವನ್ನು ಮತ್ತಷ್ಟು ಒಣಗಿಸಬಹುದು. ಆದರೆ ಮನೆಯಲ್ಲಿ ತಯಾರಿಸಿದ (ಉದಾಹರಣೆಗೆ ರೋಸ್ ವಾಟರ್, ಸೌತೆಕಾಯಿ ರಸ, ಅಥವಾ ಅಲೋವೆರಾ) ಟೋನರ್‌ಗಳು ಚರ್ಮದ pH ಮಟ್ಟವನ್ನು ಕಾಪಾಡುತ್ತವೆ.

ಟೋನರ್ ಚರ್ಮದ ರಂಧ್ರಗಳನ್ನು ಬಿಗಿಗೊಳಿಸಲು ಮತ್ತು ಚರ್ಮಕ್ಕೆ ತಕ್ಷಣದ ತಾಜಾತನ ನೀಡಲು ಸಹಾಯ ಮಾಡುತ್ತದೆ. ಚಳಿಗಾಲದಲ್ಲಿ ಇದು ‘ಹೈಡ್ರೇಟಿಂಗ್’ ಏಜೆಂಟ್ ಆಗಿ ಕೆಲಸ ಮಾಡುತ್ತದೆ.

ಇದು ಕಡಿಮೆ ಖರ್ಚಿನಲ್ಲಿ ಮತ್ತು ಯಾವುದೇ ಅಡ್ಡಪರಿಣಾಮಗಳಿಲ್ಲದೆ ಮನೆಯಲ್ಲೇ ಮಾಡಬಹುದಾದ ಸುಲಭ ಪರಿಹಾರವಾದ್ದರಿಂದ ಎಲ್ಲರೂ ಮಾಡಬಹುದಾಗಿದೆ.

ಮನೆಯ ಮುಂದೆಯೇ ಇರುವ ಅಲೋವೆರಾವನ್ನು ಪ್ರತಿದಿನ ಹಚ್ಚಿಕೊಳ್ಳುವುದರಿಂದ ನಮ್ಮ ಚರ್ಮದಲ್ಲಿರುವ ಸಮಸ್ಯೆಗಳು ಕ್ರಮೇಣ ಕಡಿಮೆಯಾಗುತ್ತವೆ.

ಎಲ್ಲರ ಮನೆಯಲ್ಲೂ ಸೌತೆಕಾಯಿ ಇದ್ದೇ ಇರುತ್ತದೆ. ಈ ಸೌತೆಕಾಯಿಯನ್ನು ತೆಗೆದುಕೊಂಡು ತುರಿದು ರಸವನ್ನು ಹೊರತೆಗೆದು ಮುಖಕ್ಕೆ ಹತ್ತಿಯಿಂದ ಹಚ್ಚಿಕೊಂಡರೆ ಚರ್ಮ ಉಸಿರಾಡುತ್ತದೆ.

ಮುಖ ತೊಳೆದುಕೊಂಡ ನಂತರ ರೋಸ್‌ ವಾಟರ್‌ನ್ನು ಟೋನರ್‌ ಆಗಿ ಬಳಸಬಹುದು.

Leave a Reply

Your email address will not be published. Required fields are marked *