ನ್ಯೂ ಇಯರ್‌ ಸೆಲೆಬ್ರೆಷನ್‌ ವೇಳೆ ಸ್ವಿಡ್ಜರ್‌ಲ್ಯಾಂಡ್‌ನಲ್ಲಿ ಸ್ಟೋಟ ಸಂಭವಿಸಿದ್ದು, 40 ಜನರು ಸಾವನ್ನಪ್ಪಿದ್ದು ನೂರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಸ್ವಿಟ್ಜರ್‌ಲ್ಯಾಂಡಿನ ಆಲ್ಟೈನ್‌ ಸ್ಕೀ ರೇಸಾರ್ಟಿನ ಕ್ರಾನ್ಸ್‌ ಮೊಂಟಾನಾದ ಬಾರ್ನದಲ್ಲಿ ಈ ಘಟನೆಯು ನಡೆದಿದ್ದು, 40 ಮಂದಿ ಸಾವನ್ನಪ್ಪಿದ್ದು, ನೂರಕ್ಕು ಹೆಚ್ಚು ಜನರು ಗಾಯಗೊಂಡಿರುವ ವಿಚಾರವನ್ನು ಸ್ವಿಸ್‌ ಪೊಲೀಸರು ಇಂದು ಬೆಳಗ್ಗೆ ಮಾಹಿತಿ ನೀಡಿದ್ದಾರೆ. ಸೋಷಿಯಲ್‌ ಮೀಡಿಯಾಗಳಲ್ಲಿ ವಿಡಿಯೋ ಕೂಡಾ ಹರಿದಾಡುತ್ತಿರುವುದನ್ನು ಕಾಣಬಹುದಾಗಿದೆ.

ಸ್ವಿಟ್ಜರ್‌ಲ್ಯಾಂಡಿನಲ್ಲಿ ಆಗಿರುವಂತಹ ಸ್ಟೋಟಕ್ಕೆ ಕಾರಣವೆನೆಂದು ಇಲ್ಲಿಯವರೆಗೂ ತಿಳಿದುಬಂದಿಲ್ಲ. 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎನ್ನುವ ಮಾಹಿತಿಯನ್ನು ನೈರುತ್ಯ ಸ್ವಿಟ್ಜರ್‌ಲ್ಯಾಂಡಿನ  ವಾಲಿಸ್‌ ಕ್ಯಾಂಟನ್‌ನ ಪೊಲೀಸ್‌ ವಕ್ತಾರರಾದ ಗೇಟನ್‌ ಲಾಥಿಯಾನ್‌ ಎಎಫ್‌ಸಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *