ಮೈಸೂರು: ಮೈಸೂರು ನಗರಿ ದಸರಾ ಉದ್ಘಾಟನಾ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಕೋಪಗೊಂಡು ಮಾತನಾಡಿರುವ ಘಟನೆ ನಡೆದಿದೆ.

ಸಿಎಂ ಸಿದ್ದರಾಮಯ್ಯನವರು ಮಾತೇ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಕಾರ್ಯಕ್ರಮ ಕುರಿತು ಮಾತನಾಡುವ ವೇಳೆ ಕಾರ್ಯಕ್ರಮದಲ್ಲಿದ್ದ ಕೆಲವರು ನಿರ್ಗಮಿಸಲು ಪ್ರಾರಂಭಿಸಿದರು, ಆ ವೇಳೆ ವೇಳೆ ವ್ಯಕ್ತಿಯೊಬ್ಬನಿಗೆ ʼಏ ಕುತ್ಕೂಳಿ ಯಾರಲೇ ಅದು ʼಎಂದು ಗದರಿಸಿದ್ದಾರೆ.

ಸಿದ್ದರಾಮಯ್ಯ ಮಾತನಾಡುವ ವೇಳೆ ಎಲ್ಲರೂ ಕಾರ್ಯಕ್ರಮದಿಂದ ಹೊರಹೋಗಲು ಯತ್ನಿಸಿದಾಗ ಯಾರಲೇ ಅದು ಸ್ವಲ್ಪಹೊತ್ತು ಕುತ್ಕೊಳ್ಳಲು ಸಾದ್ಯವಾಗದಿದ್ದರೆ ಯಾಕೆ ಕಾರ್ಯಕ್ರಮಕ್ಕೆ ಬರ್ತಿರಾ ಎಂದು ಗದರಿದ್ದಾರೆ.

ಇದಲ್ಲದೇ ಪೊಲೀಸ್‌ನವರಿಗೂ ಹೊರಹೋಗುವವರನ್ನು ಬಿಡಬೇಡಿ, ಎಲ್ಲರನ್ನೂ ವಾಪಸ್‌ ಕಾರ್ಯುಕ್ರಮಕ್ಕೆ ಕಳುಹಿಸಿ ಮಾತನಾಡುವುದನ್ನು ಕೇಳಲು ಆಗದಿದ್ದರೆ ಯಾಕೆ ಬರ್ತೀರಾ ಮನೆಯಲ್ಲಿಯೇ ಇರಬೇಕಾಗಿತ್ತು. ಎಂದು ಅಸಮಧಾನ ಹೊರಹಾಕಿದ್ದಾರೆ.

Leave a Reply

Your email address will not be published. Required fields are marked *