ಮೈಸೂರು: ಮೈಸೂರು ದಸರಾ ಎಷ್ಟೊಂದು ಸುಂದರ ಎನ್ನುವ ಹಾಗೆ ವಿಶ್ವವಿಖ್ಯಾತ ದಸರಾ ಜಂಬೂಸವಾರಿಯ ಮೆರವಣಿಗೆ ಶುರುವಾಗಿದ್ದು, ಅದೇ ಸಮಯದಲ್ಲಿ ವಿವಿಧ ವಿನ್ಯಾಸದ ಸ್ತಬ್ಧಚಿತ್ರಗಳು ಗಮನ ಸೆಳೆದಿವೆ.
ಈ ಬಾರಿ 150ಕ್ಕೂ ಹೆಚ್ಚು ವಿನ್ಯಾಸದ ಚಿತ್ರಗಳು ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿವೆ. ವಿವಿಧ ಜಿಲ್ಲೆಗಳಿಂದ ಬಂದ ಕಲಾತಂಡಗಳು ಜನರ ಮನಸನ್ನು ಸೂರೆಗೊಂಡಿವೆ. ಈ ವರ್ಷದ 58 ಸ್ತಬ್ಧ ಚಿತ್ರಗಳ ಮೆರವಣಿಗೆಯಲ್ಲಿ ಕಾಂಗ್ರೆಸ್ ಪಕ್ಷದ ಯೋಜನೆಗಳಲ್ಲೊಂದಾದ ಶಕ್ತಿ ಯೋಜನೆಯ ಚಿತ್ರಗಳು ಮತ್ತು ಸರ್ಕಾರದ ಅಭಿವೃದ್ದಿಯನ್ನು ಜನರ ಗಮನಕ್ಕೆ ತರುವ ಮತ್ತು ಜನರಿಗೆ ಮಾಹಿತಿಯನ್ನು ನೀಡುವ ಉದ್ದೇಶದಿಂದ ಸ್ತಬ್ಧಚಿತ್ರಗಳನ್ನು ವಿನ್ಯಾಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ದಸರಾ ಜಂಬುಸವಾರಿಗೆ ಕ್ಷಣಗಣನೆ ಪ್ರಾರಂಭವಾಗಿದ್ದು, ನಂಧಿ ದ್ವಜಕ್ಕೆ ಸಿಎಂ ಸಿದ್ದರಾಮಯ್ಯನವರು ಶುಭ ಧನುರ್ ಲಗ್ನದಲ್ಲಿ ಪೂಜೆಯನ್ನು ನೆರವೇರಿಸಿದ್ದು, ಮೈಸೂರು ಇಲ್ಲಾ ಉಸ್ತುವಾರಿ ಹೆಚ್.ಸಿ.ಮಹದೇವಪ್ಪ ಮತ್ತಿತರು ಭಾಗಿಯಾಗಿದ್ದರು.
