ಹಾವೇರಿ: ಈದ್ ಮಿಲಾದ್ ಹಬ್ಬದ ಮೆರವಣೆಗೆಯ ಸಮಯದಲ್ಲಿ ಗಣೇಶನಿಗೆ ಪೂಜೆಯನ್ನು ಸಲ್ಲಿಸಿದ್ದಾರೆ ನಮ್ಮ ಮುಸ್ಲೀಂ ಬಾಂಧವರು, ಈ ಮೂಲಕ ನಾವೆಲ್ಲರೂ ಒಂದು ಎಂಬುದನ್ನು ಸಾರಿದ್ದಾರೆ.
ಹಾವೇರಿ ತಾಲ್ಲೂಕಿನ ನೆಗಳೂರು ಗ್ರಾಮದಲ್ಲಿ ಹಿಂದೂ-ಮುಸ್ಲೀಂ ಭಾವೈಕ್ಯತೆಯಿಂದ ಹಬ್ಬವನ್ನು ಆಚರಿಸಿದ್ದಾರೆ.ಈದ್-ಮಿಲಾದ್ ಹಬ್ಬದ ಮೆರವಣಿಗೆಯ ಸಮಯದಲ್ಲಿ ಗಣೇಪತಿ ಮೂರ್ತಿಗೆ ಪೂಜೆಯನ್ನಿ ಸಲ್ಲಿಸಿದ್ದಾರೆ.
ಗಣಪತಿಯನ್ನು ಪೂಜಿಸುವುದರ ಮೂಲಕ ನಾವೆಲ್ಲರೂ ಒಂದೇ ಎಂಬ ಸಂದೇಶವನ್ನು ಸಾರಿದ್ದಾರೆ. ಎಲ್ಲರೂ ಕೂಡಿ ಗಣಪತಿಯನ್ನು ಆರಾಧಿಸಿ ಮಾಲೆಗಳನ್ನ ಅರ್ಪಣೆ ಮಾಡಿ ನಂತರ ಗ್ರಾಮದ ಬೀದಿಗಳಲ್ಲಿ ಈದ್-ಮಿಲಾದ್ ಹಬ್ಬದ ಮೆರವಣೆಗೆಯನ್ನು ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಪ್ರತಿವರ್ಷದಂತೆಯೇ ಈ ಬಾರಿಯೂ ಎಲ್ಲಾ ಧರ್ಮದವರು ಭಾಗವಹಿಸಿ ಹಬ್ಬವನ್ನು ಆಚರಿಸಿದ್ದಾರೆ ಎನ್ನಲಾಗಿದೆ.
