ಬೆಂಗಳೂರು: ಮುಡಾ ಹಗರಣ ಹಲವು ರೀತಿ ತಿರುವುಗಳನ್ನು ಪಡೆದುಕೊಳ್ಳುತ್ತಿರವ ಬೆಳವಣಿಗೆಯನ್ನು ಕಂಡ ಮುಡಾ ಅಧ್ಯಕ್ಷರಾದ ಮರಿಗೌಡ ರಾಜೀನಾಮೆ ನೀಡಿರುವ ವಿಚಾರದ ಕುರಿತು ಜೆಡಿಎಸ್ ವಾಗ್ದಾಳಿಯನ್ನು ನಡೆಸಿದ್ದು,ಸಿಎಂ ಸಿದ್ದರಾಮಯ್ಯನವರ ವಿರುದ್ಧ ಕಿಡಿಕಾರುತ್ತಿರುವ ಜೆಡಿಎಸ್, ಲೋಕಾಯುಕ್ತ ಅಧಿಕಾರಿಗಳ ತನಿಖೆಯಿಂದ ತಪ್ಪಿಸಿಕೊಳ್ಳಲು ರಾಜೀನಾಮೆಯನ್ನು ನೀಡಿವಂತೆ ಸೂಚನೆಯನ್ನು ನೀಡಿದ್ದಾರೆ ಎಂದು ಸಿಎಂ ವಿರುದ್ಧ ಕಿಡಿಕಾರಿದೆ.
ನಾನು ತಪ್ಪೇ ಮಾಡಿಲ್ಲ, ವೈಟ್ನರ್ ಹಾಕಿದ್ದು ನಾನಲ್ಲ, ನಾನು ಕ್ಲೀನ್ ಅಂಡ್ ಕ್ಲಿಯರ್. ಅದು ನಾನಲ್ಲ. ನಾನಲ್ಲ, ಆ ಸೈಟುಗಳಿಗೂ ನನಗೂ ಸಂಬಂಧವೇ ಇಲ್ಲ ಎನ್ನುತ್ತಿದ್ದ ಸೈಟ್ ಸಿದ್ದಪ್ಪನವರೇ. ಮೂಡಾಮರಿ ಈಗ ರಾಜೀನಾಮೆ ಕೊಟ್ಟಿದ್ದು ಯಾಕೆ? ರಾಜೀನಾಮೆ ಕೊಡಿ ಎಂದು ನೀವೇ ಹೇಳಿದಿರೋ ಅಥವಾ ಮರಿಯೇ ಸ್ವಇಚ್ಛೆಯಿಂದ ರಾಜೀನಾಮೆ ಕೊಟ್ಟಿತೋ? ನೇಷನ್ ವಾಂಟ್ಸ್ ಟು ನೋ ಎಂದು ಪ್ರಶ್ನೆ ಮಾಡಿದೆ. ಇಡಿ ಕುಣಿಕೆ ಬಿಗಿದುಕೊಳ್ಳುತ್ತಿದೆ ಆದ್ದರಿಂದ ರಾಜೀನಾಮೆ ನೀಡುವಂತೆ ಸೂಚಿಸಿದ್ದೀರಾ? ಎಂದು ಪ್ರಶ್ನೆ ಮಾಡಿದೆ.
ಪರಿಣಾಮ 1: 14 ನಿವೇಶನಗಳು ಮೂಡಾಕ್ಕೆ ವಾಪಸ್!
ಪರಿಣಾಮ 2: ಮೂಡಾ ಮರಿ ತಲೆದಂಡ!! ಪರಿಣಾಮ 3: ಇನ್ನಷ್ಟು ತಲೆದಂಡಗಳು ಕಾದಿವೆ.!