ನವದೆಹಲಿ: ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ಉಪ ಚುನಾವಣೆಯ ಅಭ್ಯರ್ಥಿಯಾಗಿ ಪ್ರಿಯಾಂಕಾ ಗಾಂಧಿಯವರನ್ನು ನೇಮಿಸಿದ್ದು, ಅವರು ಅಕ್ಟೋಬರ್‌ 23ರಂದು ನಾಮಪತ್ರವನ್ನು ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

 ನವೆಂಬರ್.13ರಂದು ನಡೆಯಲಿರುವ ವಯನಾಡು ಸಂಸದೀಯ ಉಪ ಚುನಾವಣೆಗೆ ಪ್ರಿಯಾಂಕಾ ಗಾಂಧಿಯವರನ್ನು ಚುನಾವಣಾ ಕಣಕ್ಕೆ ಇಳಿಸಲಾಗಿದ್ದು, ಉಪ ಚುನಾವಣೆಗೆ ಅಭ್ಯರ್ಥಿಯಾಗಿ ನಾಮಪತ್ರವನ್ನು ಸಲ್ಲಿಸಲಿದ್ದಾರೆ ಎಂದು ಎಐಸಿಸಿ ಮೂಲಗಳು ಮಾಹಿತಿಯನ್ನು ನೀಡಿವೆ.

ಹಿಂದೆ ನಡೆದ ಎರಡು ಲೋಕಸಬಾ ಚುನಾವಣೆಯಲ್ಲಿ ರಾಹುಲ್‌ ಗಾಂಧಿಯವರು ಎರಡೆರಡು ಬಾರೀ ಗೆಲುವನ್ನು ಸಾಧಿಸಿದ್ದರು.ವಯಾನಾಡ್‌ ಮತದಾರರು ಗಾಂಧಿ ಕುಟುಂಬದ ಜೊತೆ ಭಾವಾನಾತ್ಮಕ ಸಂಪರ್ಕವನ್ನು ಇಟ್ಟುಕೊಂಡಿರುವುದಕ್ಕಾಗಿ ರಾಹುಲ್‌ಗಾಂಧಿ ಅವರ ಬದಲಾಗಿ ಪ್ರಿಯಾಂಕಾ ಗಾಂಧಿಯವರನ್ನು ನೇಮಿಸಲಾಗಿದೆ .

Leave a Reply

Your email address will not be published. Required fields are marked *