ಬೆಂಗಳೂರು:ಮುಡಾ ಹಗರಣದ ತನಿಖೆಯನ್ನು ಎದುರಿಸುತ್ತಿರುವ ಸಿಎಂ ಸಿದ್ದರಾಮಯ್ಯನವರು ಟರ್ಫ್ ಕ್ಲಬ್ ಸದಸ್ಯತ್ವ ಕೊಡಿಸುತ್ತೇನೆಂದು 1.30 ಕೋಟಿಯನ್ನು ಲಂಚ ತೆಗೆದುಕೊಂಡಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿವೇಕಾನಂದ ಎಂಬುವವರಿಗೆ ಟರ್ಫ್ ಕ್ಲಬ್ ಸದಸ್ಯತ್ವ ಕೊಡಿಸುವ ಆಮಿಷವನ್ನೊಡ್ಡಿ 1.30 ಕೋಟಿ ರೂ.ಗಳ ಲಂಚವನ್ನು ಚೆಕ್ ರೂಪದಲ್ಲಿ ತೆಗೆದುಕೊಂಡಿದ್ದು, ಪೊಲೀಸರು ಈ ಪ್ರಕರಣಕ್ಕೆ ಬಿ ರಿಪೋರ್ಟನ್ನು ಸಲ್ಲಿಸಿದ್ದರು.ಆದ್ದರಿಂದ ನ್ಯಾಯಾಲಯವೂ ಸಿದ್ದರಾಮಯ್ಯನವರಿಗೆ ಛೀಮಾರಿಯನ್ನು ಹಾಕಿತ್ತು. ಈ ಪ್ರಕರಣದ ಕುರಿತು ತನಿಖೆಯನ್ನು ನಡೆಸಬೇಕೆಂದು ಆಗ್ರಹ ಮಾಡಿದ್ದಾರೆ.
ಸಿದ್ದರಾಮಯ್ಯನ ವಿರುದ್ದ ಆರೋಪವಿರುವ ಮುಡಾ ಹಗರಣದ ಜೊತೆಗೆ ಟರ್ಫ್ ಮೆಂಬರ್‌ಶಿಪ್ ಕೊಡಿಸುವುದಾಗಿ ಲಂಚ ಪಡೆದ ಕೇಸಿನ ತನಿಖೆಯನ್ನು ನಡೆಸಬೇಕು. ಸಿಎಂ ಅವರು ನಾನು ಮಾತ್ರ ಸಾಚಾ ಎಂದು ಬೇರೆಯವರ ವಿರುದ್ದ ಹೇಳಿಕೆಗಳನ್ನು ನೀಡುತ್ತಾರೆ. ಆದರೆ ಅವರೊಬ್ಬರು ಅಪರಾಧಿಯಾಗಿದ್ದು ತಕ್ಷಣವೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಹೇಳಿದ್ದಾರೆ.