ಉಡುಪಿ: ಬೆಂಗಳೂರಿನ ಯಲಹಂಕ ಸಮೀಪ ಒತ್ತುವರಿ ಜಮೀನಿನಲ್ಲಿ ಅಕ್ರಮವಾಗಿ ಮನೆಗಳನ್ನು ನಿರ್ಮಿಸಿರುವ ಕಾರಣ 200 ಮನೆಗಳನ್ನು ಜೆಸಿಬಿ ನೆಲಸಮಮಾಡಿತ್ತು.ಕರ್ನಾಟಕ ಸರ್ಕಾರವೂ ಉತ್ತರ ಪ್ರದೇಶದಂತೆ ʼಬುಲ್ಡೋಜರ್‌ ನೀತಿಯನ್ನು ಅನುಸರಿಸುತ್ತಿದೆ ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರವರು ಕರ್ನಾಟಕ ಸರ್ಕಾರವನ್ನು ಟೀಕಿಸಿರುವ ಪರಿಣಾಮ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರು ಕೇರಳದ ಸಿಎಂ ರವರಿಗೆ ತಿರುಗೇಟನ್ನು ನೀಡಿದ್ದಾರೆ.

ಉಡುಪಿಯ ಬೈಂದೂರಿನಲ್ಲಿ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ಕೇರಳದ ಸಿಎಂ ಯಾಕೆ ಈ ರೀತಿಯ ಹೇಳಿಕೆಯನ್ನು ನೀಡಿದ್ದಾರೋ ಗೊತ್ತಿಲ್ಲ. ಆದರೆ ಪಿಣರಾಯಿ ವಿಜಯನ್‌ರವರು ತಮ್ಮ ರಾಜ್ಯದ ಬಗ್ಗೆ ತಲೆಕೆಡಿಸಿಕೊಳ್ಳಲಿ, ನಮ್ಮ ರಾಜ್ಯದ ಸಮಸ್ಯೆಗಳನ್ನು ನಾವೇ ಪರಿಹರಿಸಿಕೊಳ್ಳುತ್ತೇವೆ . ನಿಮಗೆ ನಮ್ಮ ರಾಜ್ಯದ ವಿಚಾರ ಬೇಡ, ಚಿಂತೆಯೂ ಬೇಡ. ಮೊದಲು ಅವರ ರಾಜ್ಯದ ಕಡೆ ಗಮನ ಹರಿಸಲಿ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *