ಮೈಸೂರು: ಬಜೆಟ್ ನಂತರ ಸಿಎಂ ಬದಲಾವಣೆಯಾಗ್ತಾರೆ ಎಂದು ನಾನು ಹೇಳಿಲ್ಲ.ಸಿಎಂ ಕುರ್ಚಿಯ ಆಕಾಂಕ್ಷೆ ನನಗಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಮೈಸೂರಿನ್ಲಲಿಂದು ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯನವರು 5 ವರ್ಷಗಳ ಕಾಲ ಅಧಿಕಾರದಲ್ಲಿರುತ್ತಾರೆ.ಈವಿಚಾರದ ಕುರಿತು ನಾನು ಹಲವು ಬಾರಿ ಮಾತನಾಡಿದ್ದೇನೆಸಿಎಂ ಸಿದ್ದರಾಮಯ್ಯ ಕೂಡಾ ಹೇಳಿದ್ದಾರೆ ಈ ವಚಾರದ ಕುರಿತು ಚರ್ಚೆ ಬೇಡ ಎಂದಿದ್ದಾರೆ.
ಅಧಿಕಾರ ಹಂಚಿಕೆಯಲ್ಲೂ ನಮ್ಮ ಪಾತ್ರವಿಲ್ಲ.ಸಿಎಂ ಕುರ್ಚಿಯ ಆಕಾಂಕ್ಷೆ ನನಗಿಲ್ಲ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಚರ್ಚೆಯಿಲ್ಲ ಎಂದು ತಿಳಿಸಿದ್ದಾರೆ.
