ಬೆಂಗಳೂರಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ.ರಾಜ್ಯ ಸರ್ಕಾರದ ದುರಾಡಳಿತದಿಂದ ರಾಜ್ಯಕ್ಕೆ ಈ ಸ್ಥಿತಿ ಬಂದಿದೆ ಎಂದಿರುವ ಹೆಚ್.ಡಿ.ಕುಮಾರಸ್ವಾಮಿಯವರ ಹೇಳಿಕೆಗೆ ಡಿಕೆ ಶಿವಕುಮಾರ್ ತಿರುಗೇಟನ್ನು ನೀಡಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮದೇ ರಾಜ್ಯದ ಮರ್ಯಾದೆಯನ್ನು ಬೀದಿಗೆ ತಂದು ರಾಜ್ಯದ ಗೌರವವನ್ನು ಹಾಳು ಮಾಡುತ್ತಿದ್ದೀರಾ? ಪ್ರಕೃತಿಗೆ ಬುದ್ದಿ ಕಲಿಸಲು ಸಾದ್ಯವೇ? ಪ್ರಕೃತಿಯ ವಿಕೋಪದಿಂದ ಬಂದೊದಗಿರುವ ಸಮಸ್ಯೆಯನ್ನು ನಿಭಾಯಿಸುತ್ತೇವೆ ಎಂದು ತಿರುಗೇಟನ್ನು ನೀಡಿದ್ದಾರೆ.
ಮಳೆ ಹೆಚ್ಚಾಗಿರುವುದರಿಂದ ಚಂಡಮಾರುತ ಆಗಿದ್ದು, ಹೆಚ್ಚು ಮಳೆ ಬಂದರೂ ಅದನ್ನು ನಿಭಾಯಿಸುವ ಶಕ್ತಿ ನಮ್ಮ ಸರ್ಕಾರಕ್ಕೆ ಮತ್ತು ಜನರಿಗಿದೆ ಸಿಕ್ಕ ಅವಕಾಶದಲ್ಲಿ ಬಾಯಿಗೆ ಬಂದ ಹೇಳಿಕೆಯನ್ನು ನೀಡುವುದರ ಮೂಲಕ ರಾಜ್ಯದ ಗೌರವನ್ನು ಹಾಳು ಮಾಡುತ್ತಿದ್ದೀರಾ ಎಂದು ಹೆಚ್‌ಡಿಕೆ ವಿರುದ್ದ ಡಿ.ಕೆ.ಶಿ ಕಿಡಿಕಾರಿದ್ದಾರೆ.