ಬಳ್ಳಾರಿ: ಬಳ್ಳಾರಿ ಜಿಲ್ಲೆಯಲ್ಲಿ ಗೌರಿ ಗಣೇಶ ಹಬ್ಬದ ಪ್ರಯುಕ್ತ 3 ದಿನಗಳ ಕಾಲ ಮದ್ಯ ಮಾರಾಟವನ್ನು ನಿಷೇಧಿದಲಾಗಿದೆ ಎಂದು ತಿಳಿದುಬಂದಿದೆ.
ಗೌರಿ-ಗಣೇಶ ಹಬ್ಬದ ಪ್ರಯುಕ್ತ ಸಿರಗುಪ್ಪ ತಾಲ್ಲೂಕು, ಕಂಪ್ಲಿ ಮತ್ತು ತೆಕ್ಕಲಕೋಟೆ ಪಟ್ಟಣಗಳಲ್ಲಿ ಗಣೇಶ ವಿಸರ್ಜನೆ ಮಾಡುವ 11ನೇ ದಿನ ಮತ್ತು 13ನೇ ದಿನಗಳಲ್ಲಿ ಮದ್ಯ ಮಾರಾಟ ಮಾಡುವುದನ್ನು ನಿಷೇಧ ಮಾಡಲಾಗಿದೆ. ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಾಲಂ 21ರ ಅನ್ವಯ ಸಂಪೂರ್ಣವಾಗಿ ನಿಷೇದಿಸಿ ಎಂದು ಜಿಲ್ಲಾಧಿಕಾರಿಯಾದ ಪ್ರಶಾಂತ್ ಕುಮಾರ್ ಮಿಶ್ರಾ ಆದೇಶ ನೀಡಿದ್ದಾರೆ.

ಗಣಪತಿ ವಿಸರ್ಜನೆಯ 11ನೇ ದಿನವಾದ ಸೆಪ್ಟೆಂಬರ್ 6ರ ಬೆಳಗ್ಗೆ 6 ಗಂಟೆಯಿಂದ , ಸೆಪ್ಟೆಂಬರ್ 07ರ ಬೆಳಗ್ಗೆ 6 ಗಂಟೆಯವರೆಗೆ , ಕಂಪ್ಲಿ ಮತ್ತು ತೆಕ್ಕಲಕೋಟೆಯ ಗಣಪತಿ ವಿಸರ್ಜನೆಯ 13ನೇ ದಿನವಾದ ಸೆಪ್ಟೆಂಬರ್ 08ರಂದು ಬೆಳಗ್ಗೆ ಆರು ಗಂಟೆಯಿಂದ ಸೆಪ್ಟೆಂಬರ್ 09ರ ಬೆಳಗ್ಗೆ ಆರು ಗಂಟೆಯವರೆಗೆ ಮದ್ಯ ಮಾರಾಟ ನಿಷೇಧ ಮತ್ತು ಬಾರ್ ಆಂಡ್ ರೆಸ್ಟೊರೇಂಟುಗಳನ್ನು ತೆರೆಯವಾರದೆಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರರ ಆದೇಶದಲ್ಲಿದೆ ಎಂದು ತಿಳಿದುಬಂದಿದೆ.

