ಕೊಪ್ಪಳ: ರಾಜ್ಯ ರಾಜಖೀಯದಲ್ಲಿ ಕುರ್ಚಿ ಕದನ ಬೂದಿ ಮುಚ್ಚಿದ ಕೆಂಡದಂತೆ ಒಳಗೊಳಗೆ ಹಬೆಯಾಡುತ್ತಿದೆ. ಡಿಕೆ ಶಿವಕುಮಾರ್‌ ಸಿಎಂ ಸಿದ್ದರಾಮಯ್ಯನವರನ್ನು ಎತ್ತಂಗಡಿ ಮಾಡಿಸಿ ಒತ್ತಾಯ ಮಾಡಿಯಾದ್ರೂ ಸಿಎಂ ಕುರ್ಚಿಯಲ್ಲಿ ಕೂತುಕೊಳ್ಳುತ್ತಾರೆ ಎಂದು ಶಾಸಕ ಜನಾರ್ಧನ ರೆಡ್ಡಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉದ್ದೇಶಪೂರ್ವಕವಾಗಿ, ಒತ್ತಾಯಪೂರ್ವಕವಾಗಿಯಾದ್ರೂ ಸಿಎಂ ಕುರ್ಚಿಯ ಮೇಲೆ ಕೂತುಕೊಳ್ಳುತ್ತಾರೆ. ಇದರಲ್ಲಿ ಯಾವುದೇ ರೀತಿಯ ಅನುಮಾನವಿಲ್ಲ, ಅರಸು ದಾಖಲೆಯನ್ನು ಮುರಿಯಲು ಸಜ್ಜಾಗಿದ್ದ ಸಿಎಂ ಸೀಟನ್ನು ಕಬಳಿಸಲಿದ್ದಾರೆ ಎಂದು ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್‌ ನಡುವೆ ಚರ್ಚೆಗಳು ನಡೆಯುತ್ತಿದೆ. ಹೈಕಮಾಂಡ್‌ಗೂ ಗೊಂದಲವಿದೆ.  ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *