ಬೆಂಗಳೂರು: ಧರ್ಮಸ್ಥಳ ಕೇಸ್ ಪ್ರಕರಣದಲ್ಲಿ ಶ್ರೀಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡಿರುವ ಆರೋಪದಲ್ಲಿ ಸಮೀರ್ ಎಂ.ಡಿ.ಗೆ ಪೊಲೀಸರು ನೋಟೀಸ್ ನೀಡಿದ್ದರು.ವಿಚಾರಣೆಗೆ ಹಾಜರಾಗಬೇಕಿದ್ದ ಸಮೀರ್ ಎಂ.ಡಿ ನಾಪತ್ತೆಯಾಗಿದ್ದಾನಾ ಎಂಬ ಶಂಕೆ ಮೂಡಿದೆ.

ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಿರುವ ಹಿನ್ನೆಲೆ ಸಮೀರ್ ಮೇಲೆ ದೂರು ದಾಖಲಾಗಿತ್ತು. ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟೀಸನ್ನು ಕೂಡಾ ನೀಡಿದ್ದರು. ಆದರೆ ಆ ಯ್ಯೂಟೂಬರ್ ವಿಚಾರಣೆಗೆ ಗೈರಾಗಿದ್ದರು.ವಿಚಾರಣೆಗೆ ಹಾಜರಾಗದಿದ್ದ ಕಾರಣ ಧರ್ಮಸ್ಥಳ ಪೊಲೀಸರು ಅರೆಸ್ಟ್ ವಾರೆಂಟ್ ಸಮೇತ ಬೆಂಗಳೂರಿನ ಸಮೀರ್ ಎಂ.ಡಿ.ನಿವಾಸಕ್ಕೆ ಆಗಮಿಸಿದ್ದಾರೆ ಎಂದು ತಿಳಿದುಬಂದಿದೆ.

ಸಮೀರ್ ನಿವಾಸಕ್ಕೆ ಬಂದ ಧರ್ಮಸ್ಥಳ ಪೊಲೀಸರಿಗೆ ಸಮೀರ್ ಬೆಂಗಳೂರಿನಲ್ಲಿಲ್ಲ. ಮಂಗಳೂರಿಗೆ ಹೋಗಿದ್ದಾನೆ ಎಂದು ಮನೆಯವರು ತಿಳಿಸಿದ್ದಾರೆ. ಅರೆಸ್ಟ್ ಆಗುವ ಭಯದಲ್ಲಿರುವ ಸಮೀರ್ ನಾಪತ್ತೆಯಾಗಿದ್ದಾನಾ? ಎಂಬ ಶಂಕೆ ವ್ಯಕ್ತವಾಗಿದೆ.
