ಇಸ್ಲಾಮಾಬಾದ್: ದೆಹಲಿ ಕೆಂಪುಕೋಟೆಯ ಬಳಿ ಸ್ಟೋಟ ಸಂಭವಿಸಿದ ಬೆನ್ನಲ್ಲೇ ಇಸ್ಲಾಮಾಬಾದ್ ನ್ಯಾಯಾಂಗ ಸಂಕೀರ್ಣದ ಬಳಿ ಪ್ರಭಲ ಸ್ಟೋಟವಾಗಿದ್ದು 5ವರು ಸಾವನ್ನಪ್ಪಿದ್ದು, 20-25 ಜನರು ಗಾಯಗೊಂಡಿರುವುದನ್ನು ಪಾಕಿಸ್ತಾನಿ ಮಾಧ್ಯಮಗಳು ವರದಿ ಮಾಡಿವೆ.
ಇಸ್ಲಾಮಾಬಾದ್ ನ್ಯಾಯಾಂಗ ಸಂಕೀರ್ಣದ ಬಳಿ ಸಂಭವಿಸಿರುವ ಪ್ರಬಲ ಸ್ಪೋಟದ ಕಾರಣ ಕಾರೊಂದು ಛಿದ್ರ ಛಿದ್ರವಾಗಿದೆ ಎಂದು ವರದಿಯಾಗಿದೆ.
ತನಿಖೆಯ ಪ್ರಕಾರ ವಾಹನದಲ್ಲಿ ಗ್ಯಾಸ್ ಸಿಲಿಂಡರ್ನ ಕಾರಣದಿಂದ ಸ್ಪೋಟ ಸಂಭವಿಸಿರಬಹುದೆಂದು ಶಂಕಿಸಲಾಗಿದೆ. 12.30ರ ಸುಮಾರಿಗೆ ಕೆಲಸ ಸಮಯವಾದ್ದರಿಂದ ವಕೀಲರು, ಕೆಲಸದ ಸಿಬ್ಬಂದಿಗಳು ಭಯಭೀತರಾಗಿದ್ದಾರೆ.ಸ್ಟೋಟದ ಶಬ್ದ ಎಷ್ಟು ಹೆಚ್ಚಿತ್ತು ಎಂದುರೆ ಸುಮಾರು ಕಿಲೋಮೀಟರ್ ದೂರಕ್ಕೂ ಅಪ್ಪಳಿಸಿತ್ತು.
