ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರನದಲ್ಲಿ ಜೈಲಿನಲ್ಲಿರುವ ನಟ ದರ್ಶನ್‌ ನೋಡಲು ಸಾವಿರಾರು ಜನರು ಹಂಬಲಿಸುತ್ತಿದ್ದು ಸಿಸಿಟಿವಿ ಕಣ್ತಪ್ಪಿಸಿ ಪರಪ್ಪನ ಅಗ್ರಹಾರಕ್ಕೆ ಬಂದಿರುವ ವ್ಯಕ್ತಿ ಯಾರೆಂದು ಚರ್ಚೆಗಳು ನಡೆಯುತ್ತೀವೆ.

ಯಾವುದೇ ಜೈಲಿನಲ್ಲಿ ಕೈದಿಗಳನ್ನು ಭೇಟಿ ಮಾಡಲು ನಿರ್ದಿಷ್ಟ ನಿಯಮಗಳಿವೆ. ಭೇಟಿಯಾಗುವವರ ವಿವರಗಳನ್ನು ರಿಜಿಸ್ಟರ್‌ನಲ್ಲಿ ದಾಖಲಿಸಬೇಕು ಮತ್ತು ಸಿಸಿಟಿವಿ ಕ್ಯಾಮೆರಾಗಳ ಅಡಿಯಲ್ಲಿಯೇ ಭೇಟಿ ನಡೆಯಬೇಕು. ಆದರೆ, ಈ ‘ರಹಸ್ಯ ಭೇಟಿ’ಯಲ್ಲಿ ಯಾವುದೇ ದಾಖಲೆಗಳಿಲ್ಲದೆ ಅಥವಾ ಕ್ಯಾಮೆರಾ ವ್ಯಾಪ್ತಿಗೆ ಬರದ ಜಾಗದಲ್ಲಿ ಭೇಟಿ ನಡೆದಿದೆ ಎಂಬುದು ಗಂಭೀರ ಆರೋಪ.

ಕಾನೂನಿನ ಹಸ್ತಕ್ಷೇಪವಿಲ್ಲದೆ ಮಾತುಕತೆ ನಡೆಸಲು ಬಂದಿರಬಹುದಾದ ವ್ಯಕ್ತಿಯಾದರು ಯಾರು?ದರ್ಶನ್ ಅವರ ಮುಂದಿನ ಚಿತ್ರಗಳ ಬಗ್ಗೆ ಅಥವಾ ಆರ್ಥಿಕ ಸೆಟಲ್ಮೆಂಟ್ ಬಗ್ಗೆ ಚರ್ಚಿಸಲು ಬಂದಿರಬಹುದಾ ಎಂಬ ಉಹಾಪೋಹಗಳು ಕೇಳಿಬರುತ್ತಿದ್ದಾವೆ.ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಇಚ್ಛಿಸದವರು ಕದ್ದುಮುಚ್ಚಿ ಬಂದಿರಬಹುದು.

ಜೈಲಿನಲ್ಲಿ ಸಿಸಿಟಿವಿ ಕಣ್ತಪ್ಪಿಸಿ ಒಬ್ಬ ವ್ಯಕ್ತಿ ಒಳಗೆ ಹೋಗಿ ಬರಬೇಕೆಂದರೆ ಅಲ್ಲಿನ ಅಧಿಕಾರಿಗಳ ಸಹಕಾರವಿಲ್ಲದೆ ಸಾಧ್ಯವಿಲ್ಲ. ಈ ಹಿಂದೆ ದರ್ಶನ್ ಅವರಿಗೆ ಜೈಲಿನಲ್ಲಿ ಸಿಗರೇಟ್ ಮತ್ತು ಕಾಫಿ ನೀಡಿದ ಫೋಟೋ ವೈರಲ್ ಆಗಿ ಅಧಿಕಾರಿಗಳು ಅಮಾನತುಗೊಂಡಿದ್ದರು. ಈಗ ಮತ್ತೆ ಇಂತಹ ಘಟನೆ ನಡೆದಿದ್ದರೆ, ಅದು ಜೈಲು ಆಡಳಿತದ ವೈಫಲ್ಯವನ್ನು ತೋರಿಸುತ್ತದೆ.

ಕೊಲೆ ಪ್ರಕರಣದ ವಿಚಾರಣಾಧೀನ ಕೈದಿಯಾಗಿರುವ ದರ್ಶನ್ ಅವರನ್ನು ಇಂತಹ ಅನಧಿಕೃತ ಭೇಟಿಗಳು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಬಹುದು. ಪೊಲೀಸರು ಈ ಬಗ್ಗೆ ತನಿಖೆ ನಡೆಸಿ ಭೇಟಿಯಾದವರು ಯಾರು ಎಂದು ಪತ್ತೆಹಚ್ಚಿದರೆ, ದರ್ಶನ್ ಅವರ ಜಾಮೀನು ಪ್ರಕ್ರಿಯೆಯ ಮೇಲೂ ಇದು ನಕಾರಾತ್ಮಕ ಪರಿಣಾಮ ಬೀರಬಹುದುಎನ್ನಲಾಗಿದೆ.

Leave a Reply

Your email address will not be published. Required fields are marked *