ನವದೆಹಲಿ:ನ್ಯಾಯಾದೇವತೆಯ ಕಣ್ಣಿಗೆ ಕಪ್ಪುಪಟ್ಟಿಇಲ್ಲ ಬದಲಾಗಿ ನ್ಯಾಯದೇವತೆಯ ಒಂದು ಕೈಯಲ್ಲಿ ತಕ್ಕಡಿ ಮತ್ತು ಇನ್ನೊಂದು ಕೈಯಲ್ಲಿ ಸಂವಿಧಾನದ ಪ್ರತಿಯಿಡಿದಿರುವ ನ್ಯಾಯದೇವತೆಯ ಹೊಸ ಪ್ರತಿಮೆಯನ್ನು ಅನಾವರಣ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಮೊದಲಿನಿಂದಲೂ ನಾವು ನೋಡಿಕೊಂಡು ಬಂದಿರುವ ನ್ಯಾಯದೇವತೆಯ ಕಣ್ಣಿಗೆ ಕಪ್ಪುಪಟ್ಟಿಯನ್ನು ಕಟ್ಟಿರುತ್ತಿದ್ದರು ಆದರೆ ಇದೀಗ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರುಗಳ ಗ್ರಂಥಾಲಯದಲ್ಲಿ ನ್ಯಾಯದೇವತೆಯ ಹೊಸ ರೂಪದ ನವ ಶೈಲಿಯ ಪ್ರತಿಮೆಯನ್ನುನೋಡಬಹುದಾಗಿದೆ. ವಿಷೇಷವೆನೆಂದರೆ ನ್ಯಾಯದೇವತೆಯ ಹೊಚ್ಚ ಹೊಸ ಪ್ರತಿಮೆಯ ಸ್ಥಾಪನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದ್ದು ಹೊಸ ರೂಪದಲ್ಲಿ ಕಂಡುಬರಲಿದೆ.
ಅಂದಿನ ಕಾಲದ ನ್ಯಾಯದೇವತೆಯ ಕೈಯಲ್ಲಿ ಖಡ್ಗವಿತ್ತು.ಆದರೀಗ ಖಡ್ಗವಿರುವ ಕೈಯಲ್ಲಿ ಸಂವಿಧಾನದ ಪ್ರತಿಮೆಯನ್ನು ಕಾಣಬಹುದು.ನ್ಯಾಯದೇವತೆಯ ಕಣ್ಣಿಗೆ ಕಟ್ಟಿರುವ ಕಪ್ಪು ಪಟ್ಟಿಯನ್ನು ತೆಗೆದುಹಾಕಲಾಗಿದೆ ಎಂಬ ವಿಚಾರವನ್ನು “ಆಲ್ ಇಂಡಿಯಾ ರೇಡಿಯೊ” ವರದಿ ಮಾಡಿದ್ದುಎಲ್ಲರಲ್ಲೂ ಹೊಸ ಚೈತನ್ಯ ಮೂಡಿದೆ ಎನ್ನಲಾಗಿದೆ.
ಹಿಂದಿನಿಂದಲೂ ನಡೆದುಕೊಂಡು ಬಂದಿರುವ ವಸಾಹತುಶಾಹಿ ಪರಂಪರೆಯನ್ನು ಬಿಟ್ಟು, ಭಾರತವೂ ಮುಂದುವರೆಯಬೇಕಾಗಿದ್ದು, ನ್ಯಾಯದೇವತೆಯು ಕುರುಡಲ್ಲ.ಅವಳ ದೃಷ್ಟಿಯಲ್ಲಿ ಎಲ್ಲರೂ ಸಮಾನರು, ಎಲ್ಲರನ್ನೂ ಸಮಾನವಾಗಿ ನೋಡುತ್ತಾಳೆ ,ಎಂಬ ಸಂದೇಶವನ್ನು ಎಲ್ಲರಿಗೂ ಸಾರುವ ಉದ್ದೇಶದಿಂದ ಮುಖ್ಯ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್‌ರವರ ಅಭಿಪ್ರಾಯದಂತೆ ಬದಲಾವಣೆಯನ್ನು ಮಾಡಲಾಗಿದೆ ಎಂದು ಮಾಧ್ಯಮಗಳು ವರದಿಮಾಡಿವೆ ಎಂದು ತಿಳಿದುಬಂದಿದೆ.