ಬೆಂಗಳೂರು: ರೇಣುಕಾಸ್ವಾಮಿ ಕೊಲೆ  ಆರೋಪಿಗಳ ಜಾಮೀನು ರದ್ದಾಗಿರುವ ಹಿನ್ನೆಲೆದರ್ಶನ್‌ ಆಪ್ತ ಪ್ರದೂಷ್‌ನನ್ನು ಇನ್ಸ್‌ಪೆಕ್ಟರ್‌ ಸುಬ್ರಮಣ್ಯ ಮತ್ತು ತಂಡದವರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಜಾಮೀನು ರದ್ದು ಮಾಡುವಂತೆ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರರಣೆಯನ್ನು ಮಾಡಿದ ಸುಪ್ರೀ ಕೋರ್ಟ್‌ ಇಂದು ಮಹತ್ತರವಾದ ತೀರ್ಪನ್ನು ನೀಡಿದೆ. ದರ್ಶನ್‌ ಮತ್ತು ಇತರರ ಜಾಮೀನು ರದ್ದು ಮಾಡಿರುವ ಬೆನ್ನಲ್ಲೇ ದರ್ಶನ್‌ ಆಪ್ತ ಪ್ರದೂಷ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಎಲ್ಲಾ ಆರೋಪಿಗಳು ಸೆರೆಂಡರ್‌ ಆಗಬೇಕು. ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರೂ ಕಾನೂನಿನ ಮುಂದೆ ಮೇಲಲ್ಲ ಎಂಬ ಸಂದೇಶವನ್ನು ನೀಡಿದೆ. ಎಲ್ಲರೂ ಕಾನೂನಿನ ನಿಯಮವನ್ನು ಪಾಲಿಸಬೇಕು.ಕಾನೂನಿನ ಮುಂದೆ ಯಾರೂ ಮೇಲಲ್ಲ, ದು ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ ಆದೇಶದಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *