ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ನಿನ್ನೆ ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಾ, ʼಟಿಪ್ಪುನನ್ನು ಹೊಡೆದುಹಾಕಿದಂತೆ ಸಿದ್ದರಾಮಯ್ಯನನ್ನು ಹೊಡೆದು ಹಾಕಬೇಕುʼ ಎಂದು ನೀಡಿದ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ದೊಡ್ಡ ಕೋಲಾಹಲವನ್ನೇ ಸೃಷ್ಟಿಸಿದೆ.

ಪ್ರಜ್ಞಾವಂತರು ಸಚಿವರ ಹೇಳಿಕೆಯನ್ನು ಖಂಡಿಸುತ್ತಿದ್ದಾರೆ. ಫೇಸ್ಬುಕ್, ಟ್ವಿಟರ್‌ಗಳಲ್ಲಿ ವಿರೋಧದ ಭಾರಿ ಅಲೆಯೆದ್ದಿದ್ದು, ಅಶ್ವಥ್ ನಾರಾಯಣರನ್ನು ಕಾಂಗ್ರೆಸ್ ಕಾರ್ಯಕರ್ತರು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.
ಕಾಂಗ್ರೆಸ್ನ ಐಟಿ ಸೆಲ್ ಹೊಸ ರೀತಿಯ, ವಿಶಿಷ್ಟ ಪೋಸ್ಟರ್‌ಗಳ ಮೂಲಕ ಅಶ್ವಥ್ ನಾರಾಯಣರನ್ನು ‘ಅಸ್ವಸ್ಥ ನಾರಾಯಣ’ ಎಂದು ವ್ಯಂಗ್ಯವಾಡುತ್ತಿದ್ದಾರೆ.
ಅನೇಕ ಕಡೆಗಳಲ್ಲಿ ಪೊಲೀಸ್ ಕಂಪ್ಲೆಂಟಿಗೆ ಸಿದ್ದತೆ ನಡೆಯುತ್ತಿದೆ ಎಂದು ತಿಳಿದುಬಂದಿದ್ದು, ಸಿದ್ದರಾಮಯ್ಯನವರಿಗೆ ಜೀವ ಬೆದರಿಕೆ ಹಾಕಿದ ಅಶ್ವಥ್ ನಾರಾಯಣರನ್ನು ಬಂಧಿಸಬೇಕು ಎಂದು #ArrestAshwathNarayana ಎಂಬ ಹ್ಯಾಷ್ ಟ್ಯಾಗ್ ಮೂಲಕ ಟ್ರೆಂಡ್ ಮಾಡಲಾಗುತ್ತಿದೆ.