ಕಾಫಿ ಎಂದರೆ ಎಲ್ಲರಿಗೂ ಇಷ್ಟ. ಈ ಕಾಫಿ ಎಂದರೆ ಯಾರಿಗೆ ತಾನೆ ಇಷ್ಟವಿರುವುದಿಲ್ಲ? ಒಂದ್ ಕಪ್ ಕಾಫಿ ಕುಡಿದರೆ ಮೈಂಡ್ ಫ್ರೆಶ್ ಆಗಿ ದಿನವೆಲ್ಲಾ ಉತ್ಸಾಹಭರಿತವಾಗಿರುತ್ತದೆ ಎಂಬ ನಂಬಿಕೆಯನ್ನು ಇಟ್ಟುಕೊಂಡಿರುವ ಎಷ್ಟೋ ಜನರಿದ್ದಾರೆ.
ಎಷ್ಟೇ ಆಯಾಸವಾಗಿದ್ದರೂ ಈ ಕಾಫಿ ಅದನ್ನೆಲ್ಲಾ ಕ್ಷಣಾರ್ಧದಲ್ಲಿ ಕಡಿಮೆ ಮಾಡಿ ಆಯಾಸವನ್ನು ಒಡಿಸುತ್ತದೆ.
ಕಾಫೀ ಆಯಾಸವನ್ನು ಕಡಿಮೆ ಮಾಡುತ್ತದೆ, ಮೈಂಡ್ ಫ್ರೇಶ್ ಆಗುತ್ತದೆ ಆದರೆ ಅತಿಯಾದರೆ ಅಮೃತವೂ ವಿಷವಾಗುತ್ತೆ ಎನ್ನುವ ಮಾತನ್ನು ಎಲ್ಲರೂ ಕೇಳಿರುತ್ತೀರಿ.

ಕಾಫಿ ಸೇವನೆ ಅತಿಯಾದರೆ ಹಲವು ಆರೋಗ್ಯದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಕಾಫಿ ಸೇವನೆಯನ್ನು ಅಂದುಕೊಂಡ ಹಾಗೆ ಬಿಡಲು ಸಾದ್ಯವಿಲ್ಲ ಕಾಫಿ ಬದಲಾಗಿ ಅಥವಾ ಕಾಫಿ ಪರ್ಯಾಯವಾಗಿ ಯಾವುದಾದರೂ ಒಂದನ್ನು ನಮ್ಮ ದಿನಚರಿಯಲ್ಲಿ ಸೇರಿಸಿಕೊಳ್ಳಬೇಕಾಗುತ್ತದೆ.
ಆ ಆಹಾರ ಪದಾರ್ಥಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.
ಕಾಫಿ ಬದಲಾಗಿ ಹಣ್ಣುಗಳ ರಸ ಮಾಡಿಕೊಂಡು ಅಥವಾ ಹಣ್ಣಿನ ಜ್ಯೂಸ್ ಮಾಡಿಕೊಂಡು ಸೇವಿಸಬಹುದು.
ಕಾಫಿ ಕುಡಿಯಬೇಕೆನಿಸಿದಾಗ ಡ್ರೈಫ್ರೂಟ್ಸ್ ಗಳನ್ನು ಸೇವಿಸಬಹುದು.
ಕಾಫಿ ಕುಡಿಯಬೇಕು ಎನಿಸಿದಾಗ ಎಳನೀರೋ, ಜ್ಯೂಸೋ, ಅಥವಾ ನೀರನ್ನಾದರೂ ಕುಡಿಯಬಹುದು.

ಬೆಳಗಿನ ಸಮಯದಲ್ಲಿ ನಿದ್ದೆ ಮಾಡಬಾರದು ಆಕಸ್ಮಾತಾಗಿ ನಿದ್ದೆ ಮಾಡಿದರೆ ರಾತ್ರಿ ನಿದ್ದೆ ತಡವಾಗಿ ಬರಬಹುದು ಆದ್ದರಿಂದ ಮಧ್ಯಾಹ್ನ ನಿದ್ದೆ ಮಾಡದೆ ರಾತ್ರಿ ಚೆನ್ನಾಗಿ ನಿದ್ದೆ ಮಾಡಿದರೆ ಬ್ಯಾಲೆನ್ಸ್ ಆಗಿ ದಿನವೆಲ್ಲಾ ಉತ್ಸಾಹಭರಿತವಾಗಿರುತ್ತದೆ.

ನಮ್ಮ ದಿನಚರಿಯಲ್ಲಿ ಒಂದು ತಾಸಾದರೂ ಧ್ಯಾನಮಾಡಿದರೆ ಮನಸ್ಸು ತಿಳಿಯಾಗುತ್ತದೆ.
ಹೆಚ್ಚು ಕಾಫಿ , ಟೀ ಕುಡಿಯುವುದರಿಂದ ಕೇಫಿನ್ ಅಂಶ ದೇಹದೊಳಗೆ ಸೇರಿ ಆರೋಗ್ಯದ ಸಮಸ್ಯೆಗಳು ಬರುತ್ತವೆ. ಆದ್ದರಿಂದ ಆದಷ್ಟು ಟೀ ಕಾಫಿಯನ್ನು ಕಡಿಮೆ ಮಾಡಿಕೊಳ್ಳಿ.
ನಮ್ಮ ಆರೋಗ್ಯ ನಮ್ಮ ಕೈಯಲ್ಲಿ.